Advertisement
ಬಿಹಾರದ ನವಾಡದಲ್ಲಿ ರವಿವಾರ ಚುನಾವಣ ರ್‍ಯಾಲಿಯಲ್ಲಿ ಮಾತನಾಡಿದ ಪ್ರಧಾನಿ, “ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗುವುದು ಸಣ್ಣ ಹುದ್ದೆಯಲ್ಲ. ಅಲ್ಲದೇ ರಾಜಸ್ಥಾನದಲ್ಲಿ ಅವರು 370ನೇ ವಿಧಿಯ ಬಗ್ಗೆ ಮಾತನಾಡಿದ್ದನ್ನು ಕೇಳಲು ನನಗೆ ನಾಚಿಕೆಯಾಗುತ್ತಿದೆ. ಏಕೆ ಕಾಶ್ಮೀರ ಭಾರತದಲ್ಲಿಲ್ಲ ಎಂದು ಕಾಂಗ್ರೆಸ್ ಭಾವಿಸುತ್ತಿದೆಯೇ ಎಂದು ಪ್ರಶ್ನಿಸಿದ್ದಾರೆ.
Related Articles
Advertisement
ಮೋದಿ ಕಾಲು ಮುಟ್ಟಿ ನಮಸ್ಕರಿಸಿದ ನಿತೀಶ್….ಬಿಹಾರದ ನವಾಡದ ರ್‍ಯಾಲಿ ವೇಳೆ ಸಿಎಂ ನಿತೀಶ್ ಕುಮಾರ್ ಅವರು ಪ್ರಧಾನಿ ಮೋದಿ ಅವರ ಕಾಲು ಮುಟ್ಟಿ ನಮಸ್ಕರಿಸಿದರು. ಈ ಹಿಂದೆ ಮೋದಿ ಅವರಿಂದ ಅಂತರ ಕಾಯ್ದುಕೊಂಡಿದ್ದ ನಿತೀಶ್, ಈಗ ಕಾಲಿಗೆ ನಮಸ್ಕರಿಸಿರುವ ಈ ಫೋಟೋ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪ್ರಚಾರದಿಂದ ದೂರ ಉಳಿದ ಇಂಡಿಯಾ ಒಕ್ಕೂಟದ “ಪ್ರಧಾನಿ’ ಆಕಾಂಕ್ಷಿ: ಮೋದಿ
ಲೋಕಸಭೆ ಚುನಾವಣೆಯ ಹೊಸ್ತಿಲಲ್ಲೇ ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟದಲ್ಲಿ ಆಂತರಿಕ ಬಿರುಕು ಉಂಟಾಗಿದೆ. ಪ್ರಧಾನಿ ಅಭ್ಯರ್ಥಿಯಾಗಿ ತನ್ನನ್ನು ಆಯ್ಕೆ ಮಾಡಿಲ್ಲ ಎಂಬ ಕಾರಣಕ್ಕೆ ಹಿರಿಯ ನಾಯಕರೊಬ್ಬರು ಚುನಾವಣ ಪ್ರಚಾರದಲ್ಲಿ ಭಾಗಿಯಾಗಿಲ್ಲ ಎಂದು ಹೇಳಿದ್ದಾರೆ. ಆದರೆ ಆ ನಾಯಕರು ಯಾರು ಎಂಬುದನ್ನು ಮೋದಿ ಬಹಿರಂಗ ಪಡಿಸಿಲ್ಲ. ಜೂ.4ರ ಬಳಿಕ ಮೋದಿಗೆ ದೀರ್ಘ ರಜೆಯೇ ಜನರ ಗ್ಯಾರಂಟಿ: ಕಾಂಗ್ರೆಸ್
ತಮ್ಮ ಸ್ಥಾನವನ್ನು ಉಳಿಸಿಕೊಳ್ಳುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಪುರಾವೆ ಇಲ್ಲದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಜೂ.4ರ ಬಳಿಕ ಮೋದಿ ಅವರು ದೀರ್ಘ ರಜೆಯ ಮೇಲೆ ತೆರಳಬೇಕಾಗುತ್ತದೆ. ಇದು ದೇಶದ ಜನರು ಕೊಡುವ ಗ್ಯಾರಂಟಿ ಎಂದು ಕಾಂಗ್ರೆಸ್ ಹೇಳಿದೆ. ರವಿವಾರ ಮಾತನಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, “ಪ್ರಧಾನಿ ಮೋದಿ ಅವರ ಸುಳ್ಳುಗಳಿಂದ ದೇಶದ ಜನರು ಸುಸ್ತಾಗಿದ್ದಾರೆ. ಜೂ.4ರ ಬಳಿಕ ಅವರು ದೀರ್ಘ ರಜೆಯ ಮೇಲೆ ತೆರಳಬೇಕಾಗಿದೆ. ಇದು ದೇಶದ ಜನರು ಕೊಡುತ್ತಿರುವ ಗ್ಯಾರಂಟಿಯಾಗಿದೆ. ಕಾಂಗ್ರೆಸ್ ನೀಡಿರುವ ಗ್ಯಾರಂಟಿಗಳು 10 ವರ್ಷದ ಬಳಿಕ ಜನರಲ್ಲಿ ಹೊಸ ವಿಶ್ವಾಸವನ್ನು ಮೂಡಿಸಿವೆ ಎಂದು ಹೇಳಿದ್ದಾರೆ. ಚುನಾವಣ ರ್ಯಾಲಿಗಳಲ್ಲಿ ಕಾಂಗ್ರೆಸ್ ವಿರುದ್ಧ ಪ್ರಧಾನಿ ಮೋದಿ ಅವರು ತೀವ್ರ ವಾಗ್ಧಾಳಿ ನಡೆಸಿದ ಬೆನ್ನಲ್ಲೇ ಕಾಂಗ್ರೆಸ್ ಪ್ರತಿಕ್ರಿಯೆ ನೀಡಿದೆ.