Advertisement

ಚೊಚ್ಚಲ ಯುವ ಟೆಸ್ಟ್‌: ಲಂಕೆ ವಿರುದ್ಧ ಭಾರತಕ್ಕೆ ಇನ್ನಿಂಗ್ಸ್‌ ವಿಜಯ

04:53 PM Jul 20, 2018 | Team Udayavani |

ಹೊಸದಿಲ್ಲಿ : ಇದೇ ಮೊದಲ ಬಾರಿಗೆ ನಡೆಯುತ್ತಿರುವ ಎರಡು ಪಂದ್ಯಗಳ ಯುವ ಟೆಸ್ಟ್‌ ಸರಣಿಯ ಮೊದಲ ಪಂದ್ಯದಲ್ಲಿ ಭಾರತದ 19ರ ಕೆಳ ಹರೆಯದವರ ತಂಡ ಶ್ರೀಲಂಕೆಯ ಅಂಡರ್‌ 19 ತಂಡವನ್ನು ಇಂದಿನ ನಾಲ್ಕನೇ ದಿನದಾಟದಲ್ಲಿ 324 ರನ್‌ಗಳಿಗೆ ಆಲೌಟ್‌ ಮಾಡುವ ಮೂಲಕ ಇನ್ನಿಂಗ್ಸ್‌ ಮತ್ತು 21 ರನ್‌ಗಳ ಭರ್ಜರಿ ವಿಜಯವನ್ನು ದಾಖಲಿಸಿದೆ. 

Advertisement

ಭಾರತದ ಆಯುಷ್‌ ಬಡೋನಿ ಅಜೇಯ 185 ರನ್‌ ಮತ್ತು 72 ರನ್‌ಗಳಿಗೆ ಐದು ವಿಕೆಟ್‌ ಕಿತ್ತ ಮೋಹಿತ್‌ ಜಂಗ್ರಾ ಅವರ ಅಸಾಮಾನ್ಯ ಆಟದಿಂದ ಭಾರತಕ್ಕೆ ಚೊಚ್ಚಲ ಯುವ ಟೆಸ್ಟ್‌ ಪಂದ್ಯದಲ್ಲಿ ಭರ್ಜರಿ ಗೆಲುವು ಪ್ರಾಪ್ತವಾಯಿತು. 

ಮೊದಲ ಇನ್ನಿಂಗ್ಸ್‌ನಲ್ಲಿ ಶ್ರೀಲಂಕಾ 244 ರನ್‌ಗಳಿಗೆ ಆಲೌಟಾಗಿತ್ತು. ತಂಡದ ಪಿ ಸೂರ್ಯಭಂಡಾರ ಅವರು 69 ರನ್‌ ಬಾರಿಸಿದ್ದರು. ಭಾರತದ ಎಸೆಗಾರ ಬಡೋನಿ 24/1 ಮತ್ತು ಹರ್ಷ್‌ ತ್ಯಾಗಿ 92/4 ವಿಕೆಟ್‌ ಕಿತ್ತಿದ್ದರು. 

ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 589 ರನ್‌ಗಳಿಗೆ ಆಲೌಟಾಗಿತ್ತು. ಬಡೋನಿ ಅಜೇಯ 185, ತಾಯಡೆ 113 ರನ್‌ ಬಾರಿಸಿದ್ದರು. ಅಲ್ಲದೆ ಎನ್‌ ವಧೇರಾ 82 ಮತ್ತು ಅನುಜ್‌ ರಾವತ್‌ 63 ರನ್‌ ಕಾಣಿಕೆ ನೀಡಿದ್ದರು. ಲಂಕೆಯ ಎಸೆಗಾರ ಸೇನರತ್ನೆ 170 ರನ್‌ ವೆಚ್ಚಕ್ಕೆ 6 ವಿಕೆಟ್‌ ಕಿತ್ತಿದ್ದರು. 

ಎರಡನೇ ಇನ್ನಿಂಗ್ಸ್‌ನಲ್ಲಿ ಲಂಕಾ ತಂಡ 324 ರನ್‌ಗೆ ಆಲೌಟಾಯಿತು ಕೆಎನ್‌ಎಂ ಫ‌ನಾಂಡೋ 104 ರನ್‌ ಮತ್ತು ಎಂಎನ್‌ಕೆ ಫ‌ರ್ನಾಂಡೋ 78 ರನ್‌ ಬಾರಿಸಿದ್ದರು. ಭಾರತದ ಜಂಗ್ರಾ ಅವರ 72 ರನ್‌ ವೆಚ್ಚಕ್ಕೆ 5 ವಿಕೆಟ್‌ ಕಿತ್ತಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next