Advertisement

Football ರ್‍ಯಾಂಕಿಂಗ್‌: 5 ವರ್ಷ ಬಳಿಕ ಭಾರತ ಟಾಪ್‌-100

11:04 PM Jun 30, 2023 | Team Udayavani |

ಹೊಸದಿಲ್ಲಿ: ಭಾರತ ಫುಟ್‌ಬಾಲ್‌ ತಂಡ 5 ವರ್ಷಗಳ ಬಳಿಕ ಫಿಫಾ ರ್‍ಯಾಂಕಿಂಗ್‌ನಲ್ಲಿ ಅಗ್ರ ನೂರರಲ್ಲಿ ಸ್ಥಾನ ಸಂಪಾದಿಸಿದೆ. ಸುನೀಲ್‌ ಚೆಟ್ರಿ ಪಡೆ ನೂತನ ರ್‍ಯಾಂಕಿಂಗ್‌ನಲ್ಲಿ ಒಂದು ಸ್ಥಾನ ಮೇಲೇರಿ 100ನೇ ಸ್ಥಾನ ಅಲಂಕರಿಸಿದೆ.

Advertisement

ಕಳೆದ ಇಂಟರ್‌ಕಾಂಟಿನೆಂಟಲ್‌ ಕಪ್‌ ಹಾಗೂ ಈಗ ನಡೆಯುತ್ತಿರುವ ಸ್ಯಾಫ್‌ ಟೂರ್ನಿಯಲ್ಲಿ ನೀಡಿದ ಉತ್ತಮ ಸಾಧನೆ ಭಾರತದ ರ್‍ಯಾಂಕಿಂಗ್‌ ಪ್ರಗತಿಗೆ ಕಾರಣ.
ಸ್ಯಾಫ್‌ ಕಪ್‌ನಲ್ಲಿ ಸೆಮಿಫೈನಲ್‌ ಪ್ರವೇಶಿರುವ ಭಾರತ ಸತತ 2 ಗೆಲುವಿನೊಂದಿಗೆ ಅಭಿಯಾನ ಆರಂಭಿಸಿತ್ತು. ಮೊದಲು ಪಾಕಿಸ್ಥಾನನ್ನು, ಬಳಿಕ ನೇಪಾಲವನ್ನು ಮಣಿಸಿತ್ತು. ಕುವೈಟ್‌ ವಿರುದ್ಧ ಡ್ರಾ ಸಾಧಿಸಿತ್ತು. ಇದಕ್ಕೂ ಮುನ್ನ ಲೆಬನಾನ್‌ ತಂಡವನ್ನು 2-0 ಗೋಲುಗಳಿಂದ ಸೋಲಿಸಿ ಇಂಟರ್‌ಕಾಂಟಿನೆಂಟಲ್‌ ಕಪ್‌ ಚಾಂಪಿಯನ್‌ ಆಗಿ ಮೂಡಿಬಂದಿತ್ತು.

“ಈ ಸುದ್ದಿ ಕೇಳಿ ಖುಷಿಯಾಗಿದೆ. ಮುಂದಿನ ಕೆಲವು ಪ್ರಮುಖ ಪಂದ್ಯಗಳಲ್ಲಿ ನಾವು ಇದೇ ನಿರ್ವಹಣೆಯನ್ನು ಕಾಯ್ದುಕೊಂಡು ಈಗಿನ ರ್‍ಯಾಂಕಿಂಗ್‌ ಉಳಿಸಿಕೊಳ್ಳಬೇಕಿದೆ’ ಎಂಬುದಾಗಿ ಕೋಚ್‌ ಐಗರ್‌ ಸ್ಟಿಮಾಕ್‌ ಪ್ರತಿಕ್ರಿಯಿಸಿದ್ದಾರೆ.

ಭಾರತ ತಂಡ ಶನಿವಾರ ನಡೆಯುವ ಸ್ಯಾಫ್‌ ಕೂಟದ ಸೆಮಿಫೈನಲ್‌ನಲ್ಲಿ ಲೆಬನಾನ್‌ ವಿರುದ್ಧ ಸೆಣಸಲಿದೆ.

ಆರ್ಜೆಂಟೀನಾ ನಂ.1
ಫಿಫಾ ರ್‍ಯಾಂಕಿಂಗ್‌ನ ಅಗ್ರ 3 ಸ್ಥಾನಗಳಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಆರ್ಜೆಂಟೀನಾ ಅಗ್ರಸ್ಥಾನದಲ್ಲಿ ಮುಂದು ವರಿದಿದೆ. ಫ್ರಾನ್ಸ್‌ 2ನೇ, ಬ್ರಝಿಲ್‌ 3ನೇ ಸ್ಥಾನ ಕಾಯ್ದು ಕೊಂಡಿವೆ. ಇಂಗ್ಲೆಂಡ್‌ ಒಂದು ಸ್ಥಾನ ಪ್ರಗತಿ ಸಾಧಿಸಿ 4ಕ್ಕೆ ಏರಿದರೆ, ನಾಲ್ಕರಲ್ಲಿದ್ದ ಬೆಲ್ಜಿಯಂ 5ಕ್ಕೆ ಇಳಿದಿದೆ.

Advertisement

ಕ್ರೊವೇಶಿಯಾ ಕೂಡ ಒಂದು ಸ್ಥಾನ ಮೇಲೇರಿದೆ (6). ನೆದರ್ಲೆಂಡ್ಸ್‌ಗೆ ಒಂದು ಸ್ಥಾನ ನಷ್ಟವಾಗಿದೆ (7). ಇಟಲಿ, ಪೋರ್ಚುಗಲ್‌ ಮತ್ತು ಸ್ಪೇನ್‌ 8ರಿಂದ 10ರ ವರೆಗಿನ ಸ್ಥಾನ ಉಳಿಸಿಕೊಂಡಿವೆ.

Advertisement

Udayavani is now on Telegram. Click here to join our channel and stay updated with the latest news.

Next