ಮಾಸ್ಕೋ: ಕೋವಿಡ್ 19 ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ರಷ್ಯಾದ ಸ್ಫುಟ್ನಿಕ್ -5 ಮೊದಲ ಬ್ಯಾಚ್ ನ ಲಸಿಕೆ ಮೇ 1ರಂದು ಭಾರತ ಪಡೆಯಲಿದೆ ಎಂದು ರಷ್ಯಾದ ನೇರ ಹೂಡಿಕೆ ಬಂಡವಾಳದ(ಆರ್ ಡಿಐಎಫ್) ಮುಖ್ಯಸ್ಥ ಕಿರಿಲ್ ಡಿಮಿಟ್ರಿವ್ ತಿಳಿಸಿದ್ದಾರೆ.
ಇದನ್ನೂ ಓದಿ:ಐಪಿಎಲ್ ಮೇಲೆ ಕೊರೊನಾ ಬೌನ್ಸರ್: ಬಿಸಿಸಿಐ ಹೇಳುತ್ತಿರುವುದೇನು?
ಮೊದಲ ಹಂತದ ಬ್ಯಾಚ್ ನಲ್ಲಿ ಎಷ್ಟು ಲಸಿಕೆಯನ್ನು ರಷ್ಯಾ ಭಾರತಕ್ಕೆ ರವಾನಿಸುತ್ತಿದೆ ಮತ್ತು ಲಸಿಕೆಯನ್ನು ಎಲ್ಲಿ ತಯಾರಿಸಲಾಗಿದೆ ಎಂಬ ವಿವರ ನೀಡಿಲ್ಲ ಎಂದು ವರದಿ ತಿಳಿಸಿದೆ.
ಕೋವಿಡ್ 19 ಸೋಂಕಿನ ಎರಡನೇ ಅಲೆಯಿಂದ ಭಾರತ ತೀವ್ರ ಬಿಕ್ಕಟ್ಟನ್ನು ಎದುರಿಸುತ್ತಿದೆ. ಕೋವಿಡ್ ಪರಿಸ್ಥಿತಿಯನ್ನು ನಿಭಾಯಿಸಲು ಹೆಣಗಾಡುತ್ತಿರುವ ಭಾರತಕ್ಕೆ ಬ್ರಿಟನ್, ಜರ್ಮನಿ ಮತ್ತು ಯುಎಇ ದೇಶಗಳು ತುರ್ತು ವೈದ್ಯಕೀಯ ನೆರವು ನೀಡುವುದಾಗಿ ಘೋಷಿಸಿದೆ.
ಸ್ಫುಟ್ನಿಕ್-5 ಮೊದಲ ಬ್ಯಾಚ್ ನ ಲಸಿಕೆಯನ್ನು ಮೇ1ರಂದು ಭಾರತಕ್ಕೆ ಸರಬರಾಜು ಮಾಡಲಾಗುವುದು ಎಂದು ಡಿಮಿಟ್ರಿವ್ ತಿಳಿಸಿದ್ದಾರೆ. ರಷ್ಯಾದ ಲಸಿಕೆ ಸರಬರಾಜು ನೆರವು ಭಾರತ ಕೋವಿಡ್ 19 ಸೋಂಕಿನಿಂದ ಹೊರ ಬರಲು ದಾರಿ ತೋರಿಸಲಿದೆ ಎಂಬ ವಿಶ್ವಾಸವಿರುವುದಾಗಿ ಡಿಮಿಟ್ರಿವ್ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.