Advertisement

ಏಷ್ಯಾ ಕಪ್‌ ಕ್ರಿಕೆಟ್‌ 2022: ಆ. 28ಕ್ಕೆ ಭಾರತ-ಪಾಕಿಸ್ಥಾನ ಫೈಟ್‌?

06:50 PM Jul 08, 2022 | Team Udayavani |

ಹೊಸದಿಲ್ಲಿ: ಭಾರತ-ಪಾಕಿಸ್ಥಾನ ಕ್ರಿಕೆಟ್‌ ಅಭಿಮಾನಿಗಳ ದೃಷ್ಟಿಯೆಲ್ಲ ಅ. 23ರಂದು ಮೆಲ್ಬರ್ನ್ ಅಂಗಳದಲ್ಲಿ ನಡೆಯುವ ಟಿ20 ವಿಶ್ವಕಪ್‌ ಪಂದ್ಯದತ್ತ ನೆಟ್ಟಿದೆ. ಆದರೆ ಅಷ್ಟರೊಳಗೆ ಈ ಸಾಂಪ್ರದಾಯಿಕ ಎದುರಾಳಿಗಳು ಶ್ರೀಲಂಕಾದಲ್ಲಿ ನಡೆಯುವ ಏಷ್ಯಾ ಕಪ್‌ ಕ್ರಿಕೆಟ್‌ ಪಂದ್ಯಾವಳಿಯಲ್ಲೂ ಮುಖಾಮುಖಿ ಆಗಲಿಕ್ಕಿದೆ. ಇದು ಕೂಡ ಟಿ20 ಮಾದರಿಯ ಕೂಟವಾಗಿದೆ.

Advertisement

ಇದು 15ನೇ ಏಷ್ಯಾ ಕಪ್‌ ಪಂದ್ಯಾವಳಿಯಾಗಿದ್ದು, ವೇಳಾಪಟ್ಟಿಯನ್ನು ಶ್ರೀಲಂಕಾ ಇನ್ನೂ ಬಿಡುಗಡೆ ಮಾಡಿಲ್ಲ. ಆಗಸ್ಟ್‌. 27ರಿಂದ ಸೆಪ್ಟಂಬರ್‌ 11ರ ತನಕ ದ್ವೀಪರಾಷ್ಟ್ರದಲ್ಲಿ ಚುಟಕು ಕ್ರಿಕೆಟ್‌ ಸಮರ ಏರ್ಪಡಲಿದೆ. ಆ. 21ರಂದು ಅರ್ಹತಾ ಸುತ್ತಿನ ಸ್ಪರ್ಧೆಗಳು ಆರಂಭವಾಗುತ್ತದೆ. ಶ್ರೀಲಂಕಾ ಕ್ರಿಕೆಟ್‌ ಮಂಡಳಿಯ ಮೂಲವೊಂದರ ಪ್ರಕಾರ ಆ. 28ರಂದು ಭಾರತ-ಪಾಕಿಸ್ಥಾನ ನಡುವಿನ ಹೈ ವೋಲ್ಟೆàಜ್‌ ಪಂದ್ಯ ನಡೆಯಲಿದೆ.

ಇದು 2021ರ ಟಿ20 ವಿಶ್ವಕಪ್‌ ಬಳಿಕ ಭಾರತ-ಪಾಕಿಸ್ಥಾನ ನಡುವಿನ ಮೊದಲ ಮುಖಾಮುಖಿಯಾಗಿದೆ. ಅಂದು ದುಬಾೖಯಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ಥಾನ 10 ವಿಕೆಟ್‌ಗಳ ಜಯ ಸಾಧಿಸಿತ್ತು.

ಮೊದಲು ಏಕದಿನ ಮಾದರಿಯಲ್ಲಿದ್ದ ಏಷ್ಯಾ ಕಪ್‌ ಕ್ರಿಕೆಟ್‌ ಪಂದ್ಯಾವಳಿ 2ನೇ ಸಲ ಟಿ20 ಮಾದರಿಯಲ್ಲಿ ನಡೆಯುತ್ತಿದೆ. 2016ರ ಮೊದಲ ಟಿ20 ಏಷ್ಯಾ ಕಪ್‌ನಲ್ಲಿ ಭಾರತ ಆತಿಥೇಯ ಬಾಂಗ್ಲಾದೇಶವನ್ನು ಮಣಿಸಿ ಚಾಂಪಿಯನ್‌ ಆಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next