ಸಿಡ್ನಿ: ಆಸ್ಟ್ರೇಲಿಯ ವಿರುದ್ಧದ ಸೀಮಿತ ಓವರ್‌ಗಳ ಸರಣಿಗೆ ದಿನಗಣನೆ ಆರಂಭವಾಗಿದೆ. ನಾನಾ ಕಾರಣಗಳಿಂದಾಗಿ ಈ ಸರಣಿ ಜಾಗತಿಕ ಕ್ರಿಕೆಟಿನ ಕೇಂದ್ರಬಿಂದುವಾಗಿದೆ. ಇದಕ್ಕೀಗ ಭಾರತೀಯ ಆಟಗಾರರ ಜೆರ್ಸಿ ಕೂಡ ಸಾಥ್ ನೀಡಲಿದೆ!
ಶಿಖರ್ ಧವನ್ ತಮ್ಮ ಟ್ವಿಟರ್ ಖಾತೆಯಲ್ಲಿ ಟೀಮ್ ಇಂಡಿಯಾದ ನೂತನ ಜೆರ್ಸಿಯ ಕ್ಲೂ ಒಂದನ್ನು ಬಹಿರಂಗಪಡಿಸಿದ್ದಾರೆ. ಇದು ಭಾರತ ಕ್ರಿಕೆಟ್ ತಂಡ 1992ರ ವಿಶ್ವಕಪ್‌ನಲ್ಲಿ ಧರಿಸಿದ ಉಡುಗೆಯ ಮಾದರಿಯಾಗಿದೆ. ಈ ಮಾದರಿಯ ಜೆರ್ಸಿಯಲ್ಲಿ ಕಪಿಲ್‌ದೇವ್, ರವಿಶಾಸ್ತ್ರಿ, ಸಚಿನ್ ತೆಂಡುಲ್ಕರ್ ಸಹಿತ ಭಾರತೀಯ ತಂಡ ಅಂದು ಕಣಕ್ಕಿಳಿದಿತ್ತು ಎನ್ನುವುದು ವಿಶೇಷ.
1992 ವಿಶ್ವಕಪ್ ಕೂಡ ಆಸ್ಟ್ರೇಲಿಯದಲ್ಲೇ ಏರ್ಪಟ್ಟಿತ್ತು. ಜತೆಗೆ ನ್ಯೂಜಿಲ್ಯಾಂಡಿನ ಜಂಟಿ ಆತಿಥ್ಯವಿತ್ತು. ವಿಶ್ವಕಕಪ್‌ನಲ್ಲಿ ಮೊದಲ ಬಾರಿಗೆ ವರ್ಣಮಯ ಉಡುಗೆ, ಹಗಲು-ರಾತ್ರಿ ಪಂದ್ಯಗಳ ಪ್ರಯೋಗವಾದದ್ದು ಇದೇ ಪಂದ್ಯಾವಳಿಯಲ್ಲಿ ಎಂಬುದನ್ನು ಮರೆಯುವಂತಿಲ್ಲ.
ಇದನ್ನೂ ಓದಿ:ದಶಕದ ಶ್ರೇಷ್ಠ ಕ್ರಿಕೆಟಿಗ ಸ್ಪರ್ಧೆಯಲ್ಲಿ ಕೊಹ್ಲಿ, ಅಶ್ವಿನ್
ಭಾರತ -ಆಸ್ಟ್ರೇಲಿಯಾ ನಡುವಿನ ಸರಣಿ ನವೆಂಬರ್ 27ರಿಂದ ಆರಂಭವಾಗಲಿದೆ. ಮೂರು ಏಕದಿನ, ಮೂರು ಟಿ20 ಮತ್ತು ನಾಲ್ಕು ಟೆಸ್ಟ್ ಪಂದ್ಯಗಳು ನಡೆಯಲಿದೆ.