Advertisement
ಐಸಿಸಿ ಹಾಗೂ ಬಿಸಿಸಿಐ ಇದಕ್ಕೆ ಸಂಬಂಧಿಸಿದಂತೆ ಮಾತುಕತೆಯಲ್ಲಿ ತೊಡಗಲಿದ್ದು, ಐಸಿಸಿ ಸಭೆಯಲ್ಲಿ ವಿಷಯ ಪ್ರಸ್ತಾವನೆ ಆಗಲಿದೆ. ಬಳಿಕ ಅಂಗೀಕಾರದ ಮುದ್ರೆ ಬೀಳಲಿದೆ ಎನ್ನಲಾಗಿದೆ. ಮುಂದಿನ ವಿಶ್ವಕಪ್ ಪಂದ್ಯಾವಳಿ 2019ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆಯಲಿದ್ದು, ಅಷ್ಟರಲ್ಲಿ 2023ರ ವಿಶ್ವಕಪ್ ಕೂಟದ ಆತಿಥೇಯ ರಾಷ್ಟ್ರವನ್ನು ಅಧಿಕೃತವಾಗಿ ಪ್ರಕಟಿಸಬೇಕಿದೆ.
1983ರಲ್ಲಿ ಕಪಿಲ್‌ದೇವ್ ಸಾರಥ್ಯದ ಭಾರತ 2 ಬಾರಿಯ ಹಾಲಿ ಚಾಂಪಿಯನ್ ವೆಸ್ಟ್ ಇಂಡೀಸನ್ನು ಉರುಳಿಸಿ ವಿಶ್ವಕಪ್ ಗೆದ್ದು ಕ್ರಿಕೆಟ್ ಜಗತ್ತನ್ನೇ ಅಚ್ಚರಿಯಲ್ಲಿ ಮುಳುಗಿಸಿದ್ದು ಈಗ ಇತಿಹಾಸ. ಇಲ್ಲಿಂದ ಭಾರತದಲ್ಲಿ ಏಕದಿನ ಕ್ರಿಕೆಟ್ ಕ್ರೇಜ್ ತಾರಕಕ್ಕೇರಿತು ಎನ್ನಲಡ್ಡಿಯಿಲ್ಲ. ಇದರಿಂದ ಸ್ಫೂರ್ತಿ ಪಡೆ ಭಾರತ 1987ರಲ್ಲಿ ಮೊದಲ ವಿಶ್ವಕಪ್ ಕೂಟವನ್ನು ಯಶಸ್ವಿಯಾಗಿ ಆಯೋಜಿಸಿತ್ತು. ಕ್ರಿಕೆಟ್ ಜನಕರ ನಾಡಾದ ಇಂಗ್ಲೆಂಡಿನಿಂದ ಈ ಪ್ರತಿಷ್ಠಿತ ಪಂದ್ಯಾವಳಿಯನ್ನು ಮೊದಲ ಬಾರಿಗೆ ಬೇರೆ ಕ್ರಿಕೆಟ್ ರಾಷ್ಟ್ರದ ಆತಿಥ್ಯದಲ್ಲಿ ನಡೆಸಲಾಗಿತ್ತು. ಬಳಿಕ 1996 ಮತ್ತು 2011ರಲ್ಲೂ ವಿಶ್ವಕಪ್ ಪಂದ್ಯಾವಳಿ ಭಾರತದ ಪ್ರಧಾನ ಆತಿಥ್ಯದಲ್ಲಿ ಸಾಗಿತು.
Related Articles
Advertisement
ಇದೇ ವೇಳೆ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಆತಿಥ್ಯ ಕೂಡ ಭಾರತದ ಪಾಲಾಗಲಿದೆ. ಆದರೆ ಇದರ ಮುಂದಿನ ಆವೃತ್ತಿ ನಡೆಯುವುದು ಯಾವಾಗ ಎಂಬುದು ಇನ್ನೂ ಅಧಿಕೃತಗೊಂಡಿಲ್ಲ. ಬಹುಶಃ 2021ರಲ್ಲಿ ನಡೇದಿತೆಂಬ ನಿರೀಕ್ಷೆ ಇದೆ.
ಈ ಬಾರಿ ಇಂಗ್ಲೆಂಡಿನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಭಾರತ ಪಾಕಿಸ್ಥಾನಕ್ಕೆ ಶರಣಾಗಿತ್ತು.