Advertisement

ಬರಲಿವೆ 10 ಸಾವಿರ ಸೀಪ್ಲೇನ್‌ಗಳು!

06:00 AM Jan 01, 2018 | Team Udayavani |

ನವದೆಹಲಿ: 10 ಸಾವಿರ ಸೀಪ್ಲೇನ್‌ಗಳ ಹಾರಾಟಕ್ಕೆ ಭಾರತದಲ್ಲಿ ಅವಕಾಶವಿದೆ ಎಂದು ಸಾರಿಗೆ ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ. ದೇಶದಲ್ಲಿ 3 ರಿಂದ 4 ಲಕ್ಷ ಕೆರೆಗಳು, 2000 ಮಧ್ಯಮ ಗಾತ್ರದ ಬಂದರುಗಳು, 200 ಸಣ್ಣ ಹಾಗೂ 12 ದೊಡ್ಡ ಬಂದರುಗಳಿವೆ. ಸೀಪ್ಲೇನ್‌ಗಳು ಗಂಟೆಗೆ 400 ಕಿ.ಮೀ ವೇಗದಲ್ಲಿ ಸಂಚರಿಸಬಲ್ಲದು ಹಾಗೂ ಇದರ ವೆಚ್ಚವೂ ಕಡಿಮೆಯಾಗಿರುತ್ತದೆ ಎಂದಿದ್ದಾರೆ.

Advertisement

ಈಗಾಗಲೇ ಸ್ಪೈಸ್‌ಜೆಟ್‌ 100 ಸೀ ಪ್ಲೇನ್‌ಗಳಿಗೆ ಆರ್ಡರ್‌ ಮಾಡಿದೆ. ಇವು ತೇಲುವ ನಗರಗಳಂತೆ ಇರುತ್ತವೆ. ದೇಶದೊಳಗೆ ಮಾತ್ರವಲ್ಲ, ಸಿಂಗಾಪುರ, ಫಿಲಿಪೀನ್ಸ್‌ ಹಾಗೂ ಥಾಯ್ಲೆಂಡ್‌ಗೂ ಇವು ಸಂಚರಿಸಬಹುದಾಗಿದೆ. ಇದಕ್ಕೆ ಸಂಬಂಧಿಸಿದಂತೆ ಮುಂಬೈನಲ್ಲಿ 1 ಸಾವಿರ ಕೋಟಿ ರೂ. ವೆಚ್ಚದಲ್ಲಿ ಟರ್ಮಿನಲ್‌ ನಿರ್ಮಾಣ ಮಾಡಲಾಗುತ್ತಿದೆ.

ಸೀ ಪ್ಲೇನ್‌ಗಳು, ಜಲಮಾರ್ಗಗಳು, ವಿದ್ಯುತ್‌ಚಾಲಿತ ವಾಹನಗಳು, ಪಾಡ್‌ ಟ್ರ್ಯಾಕ್ಸಿಗಳು, ಕ್ಯಾಟಮಾರನ್‌ಗಳು ಹಾಗೂ ಎಕ್ಸ್‌ಪ್ರೆಸ್‌ವೇಗಳು ಭಾರತದ ಮುಂದಿನ ದಶಕದ ಯೋಜನೆಗಳಾಗಿರುತ್ತವೆ ಎಂದು ಗಡ್ಕರಿ ಹೇಳಿದ್ದಾರೆ. ಇವುಗಳನ್ನು 16 ಲಕ್ಷ ಕೋಟಿ ರೂ. ಮೌಲ್ಯದ ಸಾಗರಮಾಲಾ ಹಾಗೂ 7 ಲಕ್ಷ ಕೋಟಿ ರೂ. ಭಾರತಮಾಲಾ ಯೋಜನೆಯ ಅಡಿಯಲ್ಲಿ ಸೇರ್ಪಡೆಗೊಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next