Advertisement

ಭಾರತ ಬಲಿಷ್ಠ ರಾಷ್ಟ್ರವಾಗಿ ಬೆಳೆಯಲಿ: ಶೋಭಾ ಕರಂದ್ಲಾಜೆ

10:01 PM Sep 25, 2021 | Team Udayavani |

ಉಡುಪಿ: ಮುಂದಿನ 25 ವರ್ಷಗಳಲ್ಲಿ ಭಾರತವು ಜಗತ್ತಿನ ಬಲಿಷ್ಠ ರಾಷ್ಟ್ರವಾಗಿ ಬೆಳೆಯಬೇಕು ಎನ್ನುವುದು ಪ್ರಧಾನಿ ನರೇಂದ್ರ ಮೋದಿ ಅವರ ಆಶಯ. ಈ ನಿಟ್ಟಿನಲ್ಲಿ ಇಂದಿನ ಯುವಜನರು ಕ್ರಿಯಾಶೀಲರಾಗಿ ಪ್ರಯತ್ನಿಸಬೇಕು ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.

Advertisement

ಶನಿವಾರ ಎಂಜಿಎಂ ಹಾಗೂ ಪೂರ್ಣಪ್ರಜ್ಞ ಕಾಲೇಜಿನಲ್ಲಿ ನೆಹರೂ ಯುವ ಕೇಂದ್ರ, ಜಿಲ್ಲಾಡಳಿತ, ಜಿ.ಪಂ., ಎನ್ಸೆಸ್ಸೆಸ್‌, ಎನ್‌ಸಿಸಿ, ರೆಡ್‌ಕ್ರಾಸ್‌, ಸ್ಕೌಟ್ಸ್‌ ಆ್ಯಂಡ್‌ ಗೈಡ್ಸ್‌, ಕೆನರಾ ಬ್ಯಾಂಕ್‌ ವೃತ್ತ ಕಚೇರಿ ಸಹಯೋಗದಲ್ಲಿ ಹಮ್ಮಿಕೊಂಡ ಫಿಟ್‌ ಇಂಡಿಯಾ ಫ್ರೀಡಂ ರನ್‌-2.0ಗೆ ಚಾಲನೆ ನೀಡಿ ಅವರು ಮಾತನಾಡಿದರು.

ನೆಹರೂ ಯುವ ಕೇಂದ್ರದಿಂದ ಏಕಕಾಲದಲ್ಲಿ ಜಿಲ್ಲೆಯ 11 ಕಡೆಗಳಲ್ಲಿ ಫಿಟ್‌ ಇಂಡಿಯಾ ಫ್ರೀಡಂ ರನ್‌ಗೆ ಚಾಲನೆ ನೀಡಲಾಯಿತು. ಓಟದಲ್ಲಿ ಎಂಜಿಎಂ ಕಾಲೇಜು, ಉಪೇಂದ್ರ ಪೈ ಮೆಮೋರಿಯಲ್‌ ಕಾಲೇಜು, ಮಣಿಪಾಲ ಪಿಯು ಕಾಲೇಜು, ಪಿಪಿಸಿ ಎನ್ಸೆಸ್ಸೆಸ್‌, ಎನ್‌ಸಿಸಿ, ಸ್ಕೌಟ್ಸ್‌ -ಗೈಡ್ಸ್‌, ರೆಡ್‌ಕ್ರಾಸ್‌ ಹಾಗೂ ಇತರ ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿದ್ಯಾರ್ಥಿಗಳೊಂದಿಗೆ ಸಚಿವೆ ಶೋಭಾ ಕರಂದ್ಲಾಜೆ ಅವರು ಎಂಜಿಎಂ- ಇಂದ್ರಾಳಿವರೆಗಿನ ಓಟದಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ:ಉಪಾಧ್ಯಾಯರು ಏಕಾತ್ಮ ಮಾನವತೆಯ ಹರಿಕಾರ: ಅಶ್ವತ್ಥನಾರಾಯಣ್

ಜಿಲ್ಲಾಧಿಕಾರಿ ಕೂರ್ಮಾ ರಾವ್‌ ಎಂ., ಜಿ.ಪಂ. ಸಿಇಒ ಡಾ| ನವೀನ್‌ ಭಟ್‌ ವೈ., ನೆಹರೂ ಯುವ ಕೇಂದ್ರ ಸಂಘಟನೆ ರಾಜ್ಯ ನಿರ್ದೇಶಕ ಎಂ.ಎನ್‌. ನಟರಾಜ್‌, ಕೆನರಾ ಬ್ಯಾಂಕ್‌ ವೃತ್ತ ಕಚೇರಿಯ ವ್ಯವಸ್ಥಾಪಕ ಪ್ರಬಂಧಕ ರಾಮ್‌ ನಾಯ್ಕ ಕೆ., ಕಾಲೇಜಿನ ಪ್ರಾಂಶುಪಾಲ ಎಂಜಿಎಂನ ಡಾ| ದೇವಿದಾಸ್‌ ಎಸ್‌. ನಾಯ್ಕ, ಪಿಪಿಸಿಯ ಡಾ| ರಾಘವೇಂದ್ರ, ಜಿಲ್ಲಾ ಯುವ ಅಧಿಕಾರಿ ವಿಲ್ಫೆ†ಡ್‌ ಡಿ’ಸೋಜಾ ಹಾಗೂ ಜಿಲ್ಲಾ ಮಟ್ಟದ ಇತರ ಅಧಿಕಾರಿಗಳು ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next