Advertisement

ಚೀನ ಗಡಿಗೆ ಎಸ್‌-400 ಶೀಘ್ರದಲ್ಲೇ 2ನೇ ಸ್ಕ್ವಾಡ್ರನ್‌ ದೇಶಕ್ಕೆ ಹಸ್ತಾಂತರ

10:27 PM Jul 25, 2022 | Team Udayavani |

ನವದೆಹಲಿ: ಗಡಿ ರೇಖೆಯ ಬಳಿ ಅನವಶ್ಯಕವಾಗಿ ಯುದ್ಧ ವಿಮಾನ ಹಾರಾಟ ನಡೆಸುತ್ತಾ ಅಧಿಕ ಪ್ರಸಂಗಿತನ ಪ್ರದರ್ಶಿಸುತ್ತಿರುವ ಚೀನಕ್ಕೆ ಸೆಡ್ಡು ಹೊಡೆಯಲು ಭಾರತ ಸದ್ಯದಲ್ಲೇ ಉತ್ತರದಲ್ಲಿ ಹಾದು ಹೋಗಿರುವ ಉಭಯ ದೇಶಗಳ ಗಡಿರೇಖೆಯ ಬಳಿ “ಎಸ್‌-400′ ಕ್ಷಿಪಣಿ ನಿಗ್ರಹ ವ್ಯವಸ್ಥೆಯ ಎರಡನೇ ತುಕಡಿಯನ್ನು ನಿಯೋಜಿಸಲು ನಿರ್ಧರಿಸಿದೆ.

Advertisement

ರಷ್ಯಾದಿಂದ ಭಾರತಕ್ಕೆ ಈಗಾಗಲೇ ನೀಡಲಾಗಿರುವ “ಎಸ್‌-400′ ಕ್ಷಿಪಣಿ ನಿಗ್ರಹ ವ್ಯವಸ್ಥೆಯ ಮೊದಲ ತುಕಡಿಯನ್ನು ಭಾರತ- ಚೀನ ಗಡಿಯ ವಾಯುವ್ಯ ಭಾಗದಲ್ಲಿ ನಿಯೋಜಿಸಲಾಗಿದೆ.

ಭೂಮಿಯಿಂದ ಆಕಾಶಕ್ಕೆ ಉಡಾವಣೆಗೊಳ್ಳುವ ಯಾವುದೇ ಕ್ಷಿಪಣಿಗಳ ದಾಳಿಯನ್ನು “ಎಸ್‌-400′ ವ್ಯವಸ್ಥೆ ನಿಗ್ರಹಿಸುತ್ತದೆ. ಮುಂದಿನ ಮೂರು ತಿಂಗಳಲ್ಲಿ “ಎಸ್‌-400′ ತುಕಡಿಗಳ ನಿಯೋಜನೆ ಕಾರ್ಯವನ್ನು ಪೂರ್ಣಗೊಳಿಸ ಕೇಂದ್ರ ಸರ್ಕಾರ ನಿರ್ಧರಿಸಿದೆ.

ಉಭಯ ದೇಶಗಳ ಗಡಿರೇಖೆಯ ಎರಡೂ ಕಡೆಯ 10 ಕಿ.ಮೀ.ವರೆಗೆ ಯುದ್ಧ ವಿಮಾನಗಳ ಹಾರಾಟವನ್ನು ನಿಷೇಧಿಸಲಾಗಿದೆ. ಆದರೆ, ಇದನ್ನು ಪದೇ ಪದೇ ಉಲ್ಲಂಘಿಸುತ್ತಿರುವ ಚೀನ, ಭಾರತಕ್ಕೆ ಸೆಡ್ಡು ಹೊಡೆಯುತ್ತಿದೆ. ಇದೇ ಕಾರಣಕ್ಕಾಗಿ, ಭಾರತವೂ ತನ್ನ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದು ಗಡಿಯಲ್ಲಿ ಎಸ್‌-400 ತುಕಡಿಗಳ ನಿಯೋಜನೆಗೆ ನಿರ್ಧರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next