Advertisement

ಸೂಪರ್‌ಸಾನಿಕ್‌ ಕ್ರೂಸ್‌ ಕ್ಷಿಪಣಿ ಬ್ರಹ್ಮೋಸ್‌ ಪರೀಕ್ಷೆ ಯಶಸ್ವಿ

10:18 PM Sep 30, 2020 | Karthik A |

ಮಣಿಪಾಲ: ಭಾರತವು ಬುಧವಾರ ಸೂಪರ್‌ಸಾನಿಕ್‌ ಕ್ರೂಸ್‌ ಕ್ಷಿಪಣಿ ಬ್ರಹ್ಮೋಸ್‌ ಅನ್ನು ಯಶಸ್ವಿಯಾಗಿ ಪರೀಕ್ಷಿಸಿತು. ಬೆಳಗ್ಗೆ 10.45ಕ್ಕೆ ಒಡಿಶಾದ ಚಂಡಿಪುರದಲ್ಲಿ ಇಂಟಿಗ್ರೇಟೆಡ್‌ ಟೆಸ್ಟ್‌ ರೇಂಜ್‌ನಿಂದ ಗುಂಡು ಹಾರಿಸಲಾಯಿತು. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಪ್ರಕಾರ, ಈ ಕ್ಷಿಪಣಿ ಶಬ್ದದ ವೇಗಕ್ಕಿಂತ ಮೂರು ಪಟ್ಟು ವೇಗವಾಗಿ ಚಲಿಸಬಲ್ಲದು. ಇದರ ವೇಗ ಪ್ರತಿ ಗಂಟೆಗೆ ಸುಮಾರು 3,457 ಕಿ.ಮೀ. ಚಲಿಸಬಲ್ಲುದು.

Advertisement

ಪರೀಕ್ಷೆಯಲ್ಲಿ ಸೂಪರ್‌ಸಾನಿಕ್‌ ಕ್ರೂಸ್‌ ಬ್ರಹ್ಮೋಸ್‌ ಕ್ಷಿಪಣಿ ಎಲ್ಲ ಮಾನದಂಡಗಳನ್ನು ಯಶಸ್ವಿಯಾಗಿ ಪೂರೈಸಿದೆ. ಇದನ್ನು ಭೂಮಿ, ಹಡಗುಗಳು ಮತ್ತು ಫೈಟರ್‌ ಜೆಟ್‌ಗಳಿಂದ ಹಾರಿಸಬಹುದು. ಕ್ಷಿಪಣಿಯ ಮೊದಲ ಆವೃತ್ತಿಯನ್ನು 2017ರ ಮಾರ್ಚ್‌ 11ರಂದು ಪರೀಕ್ಷಿಸಲಾಯಿತು. ಭಾರತದ ಬ್ರಹ್ಮಪುತ್ರ ನದಿಯ “ಬ್ರಹ್ಮ’ ಮತ್ತು ರಷ್ಯಾದ ಮೊಸ್ಕಾವಾ ನದಿಯಿಂದ “ಮಾಸ್‌’ ಎಂಬ ಎರಡು ನದಿಗಳ ಹೆಸರಿನಿಂದ ಬ್ರಹ್ಮೋಸ್‌ ಎಂಬ ಹೆಸರು ಬಂದಿದೆ.

ಇದನ್ನು ರಷ್ಯಾದ ಎನ್‌ಪಿಒ ಮಾಶಿನೋಸ್ಟ್ರೋನಿಯಾ (ಎನ್‌ಪಿಒಎಂ) ಸಹಯೋಗದೊಂದಿಗೆ ಭಾರತದ ಡಿಆರ್‌ಡಿಒ ಸಿದ್ಧಪಡಿಸಿದೆ. ಭಾರತೀಯ ವಾಯುಪಡೆ ಮತ್ತು ನೌಕಾಪಡೆಯಲ್ಲಿರುವ ಆಯ್ದ ಸೂಪರ್‌ಸಾನಿಕ್‌ ಕ್ರೂಸ್‌ ಕ್ಷಿಪಣಿಗಳಲ್ಲಿ ಬ್ರಹ್ಮೋಸ್‌ ಕೂಡ ಸೇರಿದೆ. ಹೊಸ ಆವೃತ್ತಿಯೊಂದಿಗೆ ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿದೆ. ಮುಖ್ಯವಾಗಿ ಜಲಾಂತರ್ಗಾಮಿ ನೌಕೆಗಳು, ಹಡಗುಗಳು ಮತ್ತು ದೋಣಿಗಳನ್ನು ಗುರಿಯಾಗಿಸಲು ಇದು ಸಹಾಯಕವಾಗಿರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next