Advertisement

ಆಸೀಸ್‌ ವಿರುದ್ಧ 8ವಿಕೆಟ್‌ ಜಯ; 2-1 ರಿಂದ ಸರಣಿ ಗೆದ್ದ ಟೀಮ್‌ ಇಂಡಿಯಾ

11:27 AM Mar 28, 2017 | Team Udayavani |

ಧರ್ಮಶಾಲಾ: ಇಲ್ಲಿ  ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ  ನಡೆದ ನಿರ್ಣಾಯಕ ಟೆಸ್ಟ್‌ ಪಂದ್ಯದ 4 ನೇ ದಿನದಾಟದಲ್ಲಿ  ಟೀಮ್‌ ಇಂಡಿಯಾ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ 4 ಪಂದ್ಯಗಳ “ಬೋರ್ಡರ್‌-ಗಾವಸ್ಕರ್‌ ಸರಣಿಯನ್ನು 2-1 ರಿಂದ ಜಯಿಸಿ ಯುಗಾದಿ ಸಂಭ್ರಮದ ಗಿಫ್ಟ್ ನೀಡಿದೆ. 

Advertisement

ಆಸೀಸನ್ನು ಮೊದಲ ಇನ್ನಿಂಗ್ಸ್‌ನಲ್ಲಿ  32 ರನ್‌ ಮುನ್ನಡೆ ಪಡೆದು, 3 ನೇ ದಿನದಾಟದ 2 ನೇ ಇನ್ನಿಂಗ್ಸ್‌ನಲ್ಲಿ 137 ಕ್ಕೆ ಆಲೌಟ್‌ ಮಾಡುವ ಮೂಲಕ ಗೆಲುವಿನ ಸನಿಹ ಬಂದಿದ್ದ ರೆಹಾನೆ ಪಡೆ ಮಂಗಳವಾರ ಭರ್ಜರಿ ಗೆಲುವು ಸಾಧಿಸಿ ಸಂಭ್ರಮಿಸಿತು. 

ಗೆಲ್ಲಲು 106 ರನ್‌ ಗುರಿ ಬೆನ್ನಟ್ಟಿದ ಭಾರತ 2 ವಿಕೆಟ್‌ ನಷ್ಟಕ್ಕೆ ಗೆಲುವನ್ನು ತನ್ನದಾಗಿಸಿಕೊಂಡಿತು. ಕೆ.ಎಲ್‌.ರಾಹುಲ್‌ ಅಜೇಯ 51 , ರೆಹಾನೆ 38 ರನ್‌ಗಳಿಸಿ ಅಜೇಯರಾಗಿ ಉಳಿದರು. ವಿಜಯ್‌ 8 ರನ್‌ಗೆ ಔಟಾದರೆ , ಪೂಜಾರ ಖಾತೆ ತೆರೆಯುವ ಮುನ್ನವೆ ರನ್‌ಔಟಾದರು.

ಜಡೇಜಾ ಸರಣಿ,ಪಂದ್ಯ ಶ್ರೇಷ್ಠ 

ಸರಣಿಯುದ್ದಕ್ಕೂ ಭರ್ಜರಿ ಆಲ್‌ರೌಂಡ್‌ ಪ್ರದರ್ಶನ ನೀಡಿದ ರವೀಂದ್ರ ಜಡೇಜಾ ಪಂದ್ಯಶ್ರೇಷ್ಠ ಮತ್ತು ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. 

Advertisement

ಸಂಕ್ಷಿಪ್ತ ಸ್ಕೋರ್‌ 
ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ 300 ಆಲೌಟ್‌ , 2ನೇ ಇನ್ನಿಂಗ್ಸ್‌ 137 ಆಲೌಟ್‌ 

ಭಾರತ ಮೊದಲ ಇನ್ನಿಂಗ್ಸ್‌ 332 ಆಲೌಟ್‌ , 2ನೇ ಇನ್ನಿಂಗ್ಸ್‌ 106-2 

Advertisement

Udayavani is now on Telegram. Click here to join our channel and stay updated with the latest news.

Next