Advertisement

ಚೀನೀಯರಿಗೆ ಟೂರಿಸ್ಟ್‌ ವೀಸಾ ರದ್ದುಗೊಳಿಸಿದ ಭಾರತ! ಚೀನಾ ಉದ್ಧಟತನಕ್ಕೆ ತಕ್ಕ ಪ್ರತಿಕ್ರಿಯೆ

08:22 PM Apr 24, 2022 | Team Udayavani |

ಹೊಸದಿಲ್ಲಿ : ಚೀನದ ನಾಗರಿಕರಿಗೆ ವಿತರಿಸಲಾಗಿದ್ದ ಪ್ರವಾಸಿ ವೀಸಾಗಳನ್ನು ಭಾರತ ರವಿವಾರ ರದ್ದು ಮಾಡಿದೆ. ಈ ಮೂಲಕ ಚೀನದ ಉದ್ಧಟತನಕ್ಕೆ ತಕ್ಕ ಪ್ರತಿಕ್ರಿಯೆ ನೀಡಿದೆ. ಚೀನದ ವಿ.ವಿ.ಗಳಲ್ಲಿ ಪ್ರವೇಶ ಪಡೆದಿರುವ ಭಾರತೀಯ ವಿದ್ಯಾರ್ಥಿಗಳಿಗೆ ದೇಶ ಪ್ರವೇಶಿಸಲು ಅವಕಾಶ ಕಲ್ಪಿಸದಿರುವ ಚೀನದ ನಡೆಗೆ ಪ್ರತಿಯಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.

Advertisement

ಚೀನೀಯರಿಗೆ ವಿತರಿಸಲಾದ ಎಲ್ಲ ಪ್ರವಾಸಿ ವೀಸಾಗಳನ್ನು ಭಾರತ ಅಮಾನತು ಮಾಡಿರುವುದಾಗಿ ಅಂತಾರಾಷ್ಟ್ರೀಯ ವಿಮಾನ ಸಾರಿಗೆ ಸಂಘ (ಐಎಟಿಎ) ಮಾಹಿತಿ ನೀಡಿದೆ. ಚೀನದ ವಿ.ವಿ.ಗಳಲ್ಲಿ ಪ್ರವೇಶ ಪಡೆದಿದ್ದ ಸುಮಾರು 22 ಸಾವಿರ ಭಾರತೀಯ ವಿದ್ಯಾರ್ಥಿಗಳು, 2020ರ ಆರಂಭದಲ್ಲಿ ಕೊರೊನಾ ಹೆಚ್ಚಳವಾದ ಕಾರಣ ಚೀನದಿಂದ ಸ್ವದೇಶಕ್ಕೆ ಮರಳಿದ್ದರು.

ಈ ವಿದ್ಯಾರ್ಥಿಗಳು ಈಗ ಭೌತಿಕ ತರಗತಿಗಳಿಗೆ ಹಾಜರಾಗುವ ಸಲುವಾಗಿ ಚೀನಕ್ಕೆ ಮರಳಲು ಸಿದ್ಧರಿದ್ದಾರೆ. ಇವರನ್ನು ಕರೆಸಿಕೊಳ್ಳುವಂತೆ ಭಾರತ ಸರಕಾರ ಹಲವು ಬಾರಿ ಮನವಿ ಮಾಡಿದೆ. ಆದರೆ ಚೀನ ಮಾತ್ರ ಭಾರತೀಯ ವಿದ್ಯಾರ್ಥಿಗಳ ಪ್ರವೇಶಕ್ಕೆ ಅನುಮತಿ ನೀಡುತ್ತಿಲ್ಲ.

ಈ ನಡೆಗೆ ತಿರುಗೇಟು ಎಂಬಂತೆ ಭಾರತ ಈಗ ಚೀನೀಯರಿಗೆ ಪ್ರವಾಸಿ ವೀಸಾ ರದ್ದು ಮಾಡಿದೆ. 10 ವರ್ಷಗಳ ಮಾನ್ಯತೆ ಇರುವ ವೀಸಾಗಳೂ ಸಿಂಧುವಲ್ಲ ಎಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next