Advertisement

ಕ್ಷಿಪ್ರವಾಗಿ ಹರಡುತ್ತಿದೆ…ಕೋವಿಡ್ 19 ಪ್ರಕರಣದಲ್ಲಿ ಚೀನಾವನ್ನು ಹಿಂದಿಕ್ಕಿದ ಭಾರತ!

08:32 AM May 17, 2020 | Nagendra Trasi |

ನವದೆಹಲಿ: ಕೋವಿಡ್ 19 ಮಹಾಮಾರಿ ವೈರಸ್ ದೇಶದಲ್ಲಿ ಕ್ಷಿಪ್ರವಾಗಿ ಹರಡುತ್ತಿದ್ದು ಸಾವಿನ ಸಂಖ್ಯೆ 2,752ಕ್ಕೆ ಏರಿಕೆಯಾಗಿದೆ. ಈವರೆಗೆ 85,940 ಪ್ರಕರಣಗಳು ವರದಿಯಾಗಿದೆ. ಕಳೆದ 24ಗಂಟೆಯಲ್ಲಿ 3,970 ಕೋವಿಡ್ 19 ಪ್ರಕರಣ ಪತ್ತೆಯಾಗಿತ್ತು, ಅಲ್ಲದೇ 103 ಮಂದಿ ಸಾವನ್ನಪ್ಪಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

Advertisement

ಭಾರತದಲ್ಲಿ 85,940 ಕೋವಿಡ್ 19 ಪ್ರಕರಣಗಳು ಪತ್ತೆಯಾಗುವುದರ ಜತೆಗೆ ಚೀನಾವನ್ನು ಮೀರಿಸಿದೆ. ಚೀನಾದಲ್ಲಿ ಪತ್ತೆಯಾದ ಪ್ರಕರಣ 84,029 ಎಂದು ವರದಿ ವಿವರಿಸಿದೆ.

ಆರೋಗ್ಯ ಸಚಿವಾಲಯದ ಪ್ರಕಾರ, 53,035 ಪ್ರಕರಣಗಳು ದೃಢಪಟ್ಟಿದ್ದು, 30,152 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ ಚಾರ್ಜ್ ಆಗಿದ್ದಾರೆ. ಒಟ್ಟು ಶೇ.35.08ರಷ್ಟು ರೋಗಿಗಳು ಚೇತರಿಕೆ ಕಂಡಂತಾಗಿದೆ ಎಂದು ಸಚಿವಾಲಯ ಹೇಳಿದೆ.

ಶುಕ್ರವಾರ ಬೆಳಗ್ಗೆವರೆಗೆ 103 ಮಂದಿ ಸಾವನ್ನಪ್ಪಿದ್ದರು. ಮಹಾರಾಷ್ಟ್ರದಲ್ಲಿ 49, ಗುಜರಾತ್ ನಲ್ಲಿ 20, ಪಶ್ಚಿಮ ಬಂಗಾಳದಲ್ಲಿ 10, ದೆಹಲಿಯಲ್ಲಿ 08, ಉತ್ತರಪ್ರದೇಶದಲ್ಲಿ 07, ತಮಿಳುನಾಡಿನಲ್ಲಿ 05, ಮಧ್ಯಪ್ರದೇಶದಲ್ಲಿ ಎರಡು, ಕರ್ನಾಟಕದಲ್ಲಿ 01 ಹಾಗೂ ಹಿಮಾಚಲಪ್ರದೇಶದಲ್ಲಿ 01 ಸೇರಿದಂತೆ 103 ಮಂದಿ ಸಾವನ್ನಪ್ಪಿರುವುದಾಗಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next