Advertisement

ಕ್ಷಿಪಣಿ ಛೇದಕ ವ್ಯವಸ್ಥೆ ಯಶಸ್ವಿ ಪರೀಕ್ಷೆ

10:16 PM Nov 02, 2022 | Team Udayavani |

ನವದೆಹಲಿ:ರಕ್ಷಣಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ (ಡಿಆರ್‌ಡಿಒ) ಅಭಿವೃದ್ಧಿಪಡಿಸಿದ ಖಂಡಾಂತರ ಕ್ಷಿಪಣಿಯ ಎರಡನೇ ಹಂತದ ಪರೀಕ್ಷೆಯನ್ನು ಬುಧವಾರ ಯಶಸ್ವಿಯಾಗಿ ನಡೆಸಲಾಗಿದೆ.

Advertisement

ಒಡಿಶಾದಲ್ಲಿ ಇರುವ ಡಾ.ಎ.ಪಿ.ಜೆ.ಅಬ್ದುಲ್‌ ಕಲಾಂ ದ್ವೀಪದ ಕರಾವಳಿಯಲ್ಲಿ ಈ ಪರೀಕ್ಷೆಯಲ್ಲಿ ವಿವಿಧ ಭೌಗೋಳಿಕ ಹಂತದಲ್ಲಿ ಅಳವಡಿಸಲಾಗಿದ್ದ ಎಲ್ಲಾ ಖಂಡಾಂತರ ಕ್ಷಿಪಣಿ ವ್ಯವಸ್ಥೆಯನ್ನೂ ಸೇರ್ಪಡೆ ಮಾಡಲಾಗಿತ್ತು.

ಇದೊಂದು ಕ್ಷಿಪಣಿಗಳ ಛೇದಕ ವ್ಯವಸ್ಥೆ ಎಡಿ-1ರ ಪರೀಕ್ಷೆಯಾಗಿದೆ ಮತ್ತು 100 ಕಿಮೀ ದೂರದಲ್ಲಿ ಇರುವ ನೆಲೆಯನ್ನು ಯಶಸ್ವಿಯಾಗಿ ಛೇದಿಸಿದೆ.ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಡಿಆರ್‌ಡಿಒದ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಇದೊಂದು ವಿಶೇಷ ರೀತಿಯಾಗಿರುವ ಕ್ಷಿಪಣಿ ಛೇದಕ ವ್ಯವಸ್ಥೆಯಾಗಿದೆ. ಜಗತ್ತಿನ ಕೆಲವೇ ಕೆಲವು ರಾಷ್ಟ್ರಗಳಿಗೆ ಇಂಥ ಸಾಧನೆ ಮಾಡಲು ಸಾಧ್ಯವಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next