ನವದೆಹಲಿ: ಭಾರತದಲ್ಲಿ ಕೋವಿಡ್ 19 ಸೋಂಕಿನ ಎರಡನೇ ಅಲೆ ಇನ್ನೂ ಮುಂದುವರಿದಿದೆ ಎಂದು ಕೇಂದ್ರ ಸರ್ಕಾರ ಗುರುವಾರ (ಸೆಪ್ಟೆಂಬರ್ 09) ಬಿಡುಗಡೆಗೊಳಿಸಿರುವ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ:ಕಳೆದ ವಾರದಲ್ಲಿ ದೇಶದಲ್ಲಿ ಪತ್ತೆಯಾದ ಕೋವಿಡ್ ಪ್ರಕರಣಗಳಲ್ಲಿ ಶೇ.68ರಷ್ಟು ಕೇರಳದ ಕೊಡುಗೆ.!
ದೇಶದಲ್ಲಿ ಕೋವಿಡ್ ಎರಡನೇ ಅಲೆ ಇನ್ನೂ ಮುಗಿದಿಲ್ಲ. ಕೆಲವು ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೋವಿಡ್ 19 ಸೋಂಕು ಪ್ರಕರಣ ವರದಿಯಾಗುತ್ತಿದೆ. ಭಾರತದಲ್ಲಿನ 35 ಜಿಲ್ಲೆಗಳಲ್ಲಿ ವಾರದ ಕೋವಿಡ್ ಪಾಸಿಟಿವಿಟಿ ದರ ಶೇ.10ಕ್ಕಿಂತಲೂ ಅಧಿಕವಿದೆ. ಸುಮಾರು 30 ಜಿಲ್ಲೆಗಳಲ್ಲಿ ಶೇ.5ರಿಂದ 10ರ ನಡುವೆ ಪಾಸಿಟಿವಿಟಿ ದರ ಇದ್ದಿರುವುದಾಗಿ ಕೇಂದ್ರ ಸರ್ಕಾರ ಹೇಳಿದೆ.
ಒಟ್ಟು ಪ್ರಕರಣಗಳಲ್ಲಿ ಶೇ.68.59ರಷ್ಟು ಕೋವಿಡ್ 19 ಸೋಂಕು ಪ್ರಕರಣ ಕೇರಳ ರಾಜ್ಯದಲ್ಲಿ ಪತ್ತೆಯಾಗಿದೆ. ಅಲ್ಲದೇ ಮುಂಬರುವ ಹಬ್ಬಗಳನ್ನು ಜನರು ಸರಳವಾಗಿ ಆಚರಿಸುವಂತೆ ಐಸಿಎಂಆರ್ ನ ಡಾ.ಬಲರಾಮ್ ಭಾರ್ಗವ್ ಅವರು ಸಲಹೆ ನೀಡಿದ್ದಾರೆ.
ಹಬ್ಬಗಳನ್ನು ಸರಳವಾಗಿ ಆಚರಿಸುವ ಮೂಲಕ ಸೋಂಕು ಹರಡುವುದನ್ನು ತಡೆಗಟ್ಟಬಹುದಾಗಿದೆ. ಅಗತ್ಯವಿರುವ ಸ್ಥಳಗಳಿಗೆ ಮಾತ್ರ ಪ್ರಯಾಣಿಸುವುದು ಕೂಡಾ ಮುನ್ನೆಚ್ಚರಿಕೆಯ ಕ್ರಮಗಳಲ್ಲಿ ಒಂದಾಗಿದೆ ಎಂದು ಡಾ.ಭಾರ್ಗವ್ ತಿಳಿಸಿದ್ದಾರೆ.