ಹೊಸದಿಲ್ಲಿ: ಪ್ರವಾಸಿ ಶ್ರೀಲಂಕಾ ವಿರುದ್ಧ ನಡೆಯುವ ಟಿ20 ಹಾಗೂ ಟೆಸ್ಟ್ ಸರಣಿಗಳ ವೇಳಾಪಟ್ಟಿಯಲ್ಲಿ ಬಿಸಿಸಿಐ ಕೆಲವು ಪರಿವರ್ತನೆ ಮಾಡಿದೆ.
ಪರಿಷ್ಕೃತ ವೇಳಾಪಟ್ಟಿ ಪ್ರಕಾರ ವೆಸ್ಟ್ ಇಂಡೀಸ್ ವಿರುದ್ಧದ 3 ಪಂದ್ಯಗಳ ಟಿ20 ಸರಣಿ ಮುಗಿದ ಬೆನ್ನಲ್ಲೇ ಭಾರತ-ಶ್ರೀಲಂಕಾ ನಡುವೆ ಮೊದಲು ಟಿ20 ಸರಣಿ ಏರ್ಪಡಲಿದೆ.
ಮೊದಲ ಪಂದ್ಯ ಫೆ. 24ರಂದು ಲಕ್ನೋದಲ್ಲಿ ನಡೆಯಲಿದೆ. ಉಳಿದೆರಡು ಪಂದ್ಯಗಳು ಫೆ .26 ಮತ್ತು 27ರಂದು ಧರ್ಮಶಾಲಾದಲ್ಲಿ ಏರ್ಪಡಲಿವೆ.
ಇದನ್ನೂ ಓದಿ:ಐಪಿಎಲ್‌ನಲ್ಲಿ ಕೋಟಿ ಸಿಗುತ್ತಿದ್ದಂತೆ ಪಾಕಿಸ್ಥಾನ ಲೀಗ್ ತೊರೆದ ಹೇಲ್ಸ್
ಟಿ20 ಸರಣಿ ಮುಗಿದ ಬಳಿಕ ಭಾರತ ಹಾಗೂ ಶ್ರೀಲಂಕಾ ತಂಡಗಳು 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮುಖಾಮುಖಿಯಾಗಿಲಿವೆ. ಮೊದಲ ಟೆಸ್ಟ್ ಮಾರ್ಚ್ 4ರಿಂದ 8ರ ವರೆಗೆ ಮೊಹಾಲಿಯಲ್ಲಿ, ದ್ವಿತೀಯ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಾ. 12ರಿಂದ 16ರ ವರೆಗೆ ನಡೆಯಲಿದೆ. ಇದು ಪಿಂಕ್‌ಬಾಲ್ ಟೆಸ್ಟ್ ಆಗಿರಲಿದೆ.