ಕೊಲೊಂಬೋ: ಭಾರತ ಮತ್ತು ಶ್ರೀಲಂಕಾ ನಡುವಿನ ದ್ವಿಪಕ್ಷೀಯ ಸಂಬಂಧ ವೃದ್ಧಿ ನಿಟ್ಟಿನಲ್ಲಿ 6 ಒಪ್ಪಂದಗಳಿಗೆ ಉಭಯ ರಾಷ್ಟ್ರಗಳು ಸಹಿ ಹಾಕಿವೆ.
ಶ್ರೀಲಂಕಾ ರಾಜಧಾನಿ ಕೊಲೊಂಬೋದಲ್ಲಿ 18ನೇ ಬಂಗಾಲ ಕೊಲ್ಲಿ ಬಹು ಕ್ಷೇತ್ರೀಯ ತಾಂತ್ರಿಕ ಮತ್ತು ಆರ್ಥಿಕ ಸಹ ಕಾರ ಒಕ್ಕೂಟ (ಬಿಮ್‌ಸ್ಟೆಕ್)ರಾಷ್ಟ್ರಗಳ ಸಚಿವರ ಸಭೆಯ ವೇಳೆ ಈ ಒಪ್ಪಂದಗಳು ನಡೆದಿವೆ.
ಮೂರು ದ್ವೀಪಗಳಲ್ಲಿ ಹೈಬ್ರಿಡ್ ವಿದ್ಯುತ್ ಯೋಜನೆಗಳು, ಮೀನುಗಾರಿಕೆಗೆ ಅನುಕೂಲವಾಗುವಂಥ ಬಂದರುಗಳ ಅಭಿವೃದ್ಧಿ, ಗಾಲೆ ಜಿಲ್ಲೆಯಲ್ಲಿನ 200 ಶಾಲೆಗಳಿಗೆ ಆಧುನಿಕ ಕಂಪ್ಯೂಟರ್ ಲ್ಯಾಬ್‌ಗಳು ಮತ್ತು ಪಠ್ಯಕ್ರಮ ಅಭಿವೃದ್ಧಿ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಇದಲ್ಲದೆ ವಿದೇಶಾಂಗ ಸಚಿವಾಲಯ ಭಾಗವೇ ಆಗಿರುವ ಸುಷ್ಮಾ ಸ್ವರಾಜ್ ಇನ್‌ಸ್ಟಿಟ್ಯೂಟ್ ಆಫ್ ಫಾರಿನ್ ಸರ್ವಿಸ್ ಮತ್ತು ದ್ವೀಪರಾಷ್ಟ್ರದ ಭಂಡಾರ ನಾಯಕೆ ಇಂಟರ್‌ನ್ಯಾಶನಲ್ ಡಿಪ್ಲೊಮ್ಯಾ ಟಿಕ್ ಟ್ರೈನಿಂಗ್ ಇನ್‌ಸ್ಟಿಟ್ಯೂಟ್ ನಡುವೆ ಪ್ರತ್ಯೇಕ ಒಪ್ಪಂದವೂ ನಡೆದಿವೆ. ಭಾರತದ ವಿದೇ ಶಾಂಗ ಸಚಿವ ಎಸ್. ಜೈಶಂಕರ್ ಅವರು ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜ ಪಕ್ಸ, ಪ್ರಧಾನಿ ಮಹಿಂದಾ ರಾಜಪಕ್ಸ ವಿವಿಧ ಸಚಿವರ ಜತೆಗೆ ಮಾತುಕತೆ ನಡೆಸಿದ್ದಾರೆ.
ಇದನ್ನೂ ಓದಿ:ಪಂಜಾಬ್: ಅಧಿಕಾರಿಗಳನ್ನು ಒತ್ತೆಯಾಳು ಮಾಡಿಕೊಂಡ ರೈತರು
ಸಂಘಟಿತ ಹೋರಾಟಕ್ಕೆ ಕರೆ: ಉಗ್ರವಾದ, ಹಿಂಸಾತ್ಮಕವಾಗಿರುವ ತೀವ್ರಗಾಮಿತ್ವದ ವಿರುದ್ಧ ಬಿಮೆಸ್ಟೆಕ್ ರಾಷ್ಟ್ರಗಳು ಸಂಘಟಿತ ವಾಗಿ ಹೋರಾಟ ನಡೆಸಬೇಕು ಎಂದು ಜೈಶಂಕರ್ ಅಭಿಪ್ರಾಯಪಟ್ಟಿದ್ದಾರೆ. ಸಭೆ ಯಲ್ಲಿ ಮಾತನಾಡುತ್ತಾ, ಭಯೋತ್ಪಾದನೆ ಮತ್ತು ತೀವ್ರಗಾಮಿತ್ವವನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಅದನ್ನು ತಡೆಯಲು ಒಕ್ಕೂ ಟದ ಸದಸ್ಯ ರಾಷ್ಟ್ರಗಳು, ಒಗ್ಗೂಡಿ ದುಡಿಯಬೇಕಾಗಿದೆ ಎಂದಿದ್ದಾರೆ.
ಉಕ್ರೇನ್ ಬಿಕ್ಕಟ್ಟಿನ ಕುರಿತು ಪ್ರಸ್ತಾವಿಸಿದ ಅವರು, ಅಂತಾರಾಷ್ಟ್ರೀಯ ಶಾಂತಿ, ಭದ್ರತೆ ಮತ್ತು ಸ್ಥಿರತೆಯನ್ನು ಕಾಯ್ದುಕೊಳ್ಳುವು ದರಲ್ಲಿ ಯಾವುದೇ ರೀತಿ ರಾಜಿ ಮಾಡಿಕೊಳ್ಳಬಾರದು. ಅಂತಾರಾಷ್ಟ್ರೀಯ ವ್ಯವಸ್ಥೆ ಸದ್ಯ ಅತ್ಯಂತ ಸವಾಲಿನ ಸ್ಥಿತಿಯನ್ನು ಎದುರಿಸುತ್ತಿದೆ. ಈಗಷ್ಟೇ ಜಗತ್ತಿನಲ್ಲಿ ಕೊರೊನಾ ಬಿಕ್ಕಟ್ಟು ಕೊನೆಗೊಳ್ಳುತ್ತಿದೆ. ಉಕ್ರೇನ್‌ನಲ್ಲಿ ನಡೆ ಯುತ್ತಿರುವ ಬೆಳವಣಿಗೆ ಗಳು ಅಂತಾ ರಾಷ್ಟ್ರೀಯ ಬಿಕ್ಕಟ್ಟು ಸೃಷ್ಟಿಗೆ ಕಾರಣವಾಗಿದೆ ಎಂದಿದ್ದಾರೆ. ರಾಷ್ಟ್ರಗಳ ನಡುವೆ ಬಹು ಮುಖ್ಯವಾಗಿ ವ್ಯಾಪಾರ ಮತ್ತು ವಾಣಿಜ್ಯ ಕ್ಷೇತ್ರಗಳಲ್ಲಿ ಉತ್ತಮ ರೀತಿಯದ್ದಾಗಿರುವ ಬಾಂಧವ್ಯ ಹೊಂದಿರ ಬೇಕಾದದ್ದೂ ಅಗತ್ಯವೆಂದು ಜೈಶಂಕರ್ ಪ್ರತಿಪಾದಿಸಿದ್ದಾರೆ.