Advertisement

ಎರಡು ವಾರಗಳ ಭಾರತ-ಲಂಕಾ ಮಿತ್ರ ಶಕ್ತಿ – 6 ಜಂಟಿ ಸೇನಾ ಕವಾಯತು ಆರಂಭ

09:12 AM Mar 29, 2019 | Sathish malya |

ಕೊಲಂಬೋ : ಉಗ್ರ ನಿಗ್ರಹವೂ ಸೇರಿದಂತೆ ಉಭಯ ಸೇನೆಗಳ ನಡುವೆ ಸಹಕಾರ ಮತ್ತು ಹೊಂದಾಣಿಕೆಯನ್ನು ಸಾಧಿಸುವ ನಿಟ್ಟಿನಲ್ಲಿ ಭಾರತ ಮತ್ತು ಶ್ರೀಲಂಕಾ ಸೇನೆಗಳು ಇಂದು ಬುಧವಾರದಿಂದ ಎರಡು ವಾರಗಳ ಜಂಟಿ ಸೇನಾ ಕವಾಯತನ್ನು ಈ ದ್ವೀಪ ರಾಷ್ಟ್ರದಲ್ಲಿ ಆರಂಭಿಸಿವೆ.

Advertisement

ವಾರ್ಷಿಕ ನೆಲೆಯಲ್ಲಿ ನಡೆಯುವ ಈ ಜಂಟಿ ಕವಾಯತು “ಮಿತ್ರ ಶಕ್ತಿ – 6” ನಾಮಾಂಕಿತವಾಗಿದೆ.

ಭಾರತ – ಲಂಕಾ ಸೇನೆಗಳ ಸಂಬಂಧ ಮತ್ತು ಸಾಮರ್ಥ್ಯ ವೃದ್ದಿಯೇ ಮೊದಲಾದ ಗುಣಾತ್ಮಕ ಅಂಶಗಳನ್ನು ಸಾಧಿಸುವ ನಿಟ್ಟಿನಲ್ಲಿ ಈ ಜಂಟಿ ಕವಾಯತನ್ನು ಕೈಗೊಳ್ಳಲಾಗುತ್ತಿದೆ ಎಂದು ಲಂಕಾ ಸೇನೆ ಹೇಳಿದೆ.

ಎರಡು ವಾರಗಳ ಈ ಸೇನಾ ಕವಾಯತಿನಲ್ಲಿ ಭಾರತದ ಮತ್ತು ಲಂಕೆಯ ತಲಾ 120 ಸೈನಿಕರು ಪಾಲ್ಗೊಳ್ಳುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next