Advertisement

India-South Africa; ವನಿತೆಯರ ಟಿ20 ಸರಣಿ ಇಂದಿನಿಂದ

12:55 AM Jul 05, 2024 | Team Udayavani |

ಚೆನ್ನೈ: ಏಕದಿನ ಮತ್ತು ಏಕೈಕ ಟೆಸ್ಟ್‌ ಪಂದ್ಯದಲ್ಲಿ ಜಯಭೇರಿ ಬಾರಿಸಿರುವ ಭಾರತೀಯ ವನಿತಾ ತಂಡವು ಶುಕ್ರವಾರದಿಂದ ಆರಂಭವಾಗುವ ಮೂರು ಪಂದ್ಯಗಳ ಟಿ20 ಸರಣಿಯಲ್ಲೂ ಶ್ರೇಷ್ಠ ನಿರ್ವಹಣೆ ನೀಡುವ ಉತ್ಸಾಹದಲ್ಲಿದೆ. ಈ ಮೂಲಕ ಮುಂಬರುವ ಏಷ್ಯಾ ಕಪ್‌ ಮತ್ತು ಟಿ20 ವಿಶ್ವಕಪ್‌ಗೆ ಸಿದ್ಧಗೊಳ್ಳಲು ಬಯಸಿದೆ.
ಏಕದಿನ ಸರಣಿಯಲ್ಲಿ 0-3 ಅಂತರದ ಸೋಲು ಮತ್ತು ಏಕೈಕ ಟೆಸ್ಟ್‌ನಲ್ಲೂ ಸೋತು ಆಘಾತಕ್ಕೆ ಒಳಗಾಗಿರುವ ಲಾರಾ ವೂಲ್ವಾರ್ಡ್‌ ನೇತೃತ್ವದ ದಕ್ಷಿಣ ಆಫ್ರಿಕಾ ಪಡೆ ಟಿ20 ಸರಣಿಯಲ್ಲಾದರೂ ಮೊದಲ ಗೆಲುವಿನ ನಿರೀಕ್ಷೆಯಲ್ಲಿದೆ.

Advertisement

ಜುಲೈ 19ರಿಂದ ಶ್ರೀಲಂಕಾದಲ್ಲಿ ಏಷ್ಯಾ ಕಪ್‌ ಮತ್ತು ಅಕ್ಟೋಬರ್‌ 4ರಿಂದ ಬಾಂಗ್ಲಾದೇಶದಲ್ಲಿ ಐಸಿಸಿ ಟಿ20 ವಿಶ್ವಕಪ್‌ ನಡೆಯುವ ಕಾರಣ ಭಾರತ ಟಿ20 ಸರಣಿಯನ್ನು ಹಗುರವಾಗಿ ಕಾಣುವ ಸಾಧ್ಯತೆಯಿಲ್ಲ. ಸರಣಿ ಗೆದ್ದು ಗೆಲುವಿನ ಆತ್ಮವಿಶ್ವಾಸದೊಂದಿಗೆ ಶ್ರೀಲಂಕಾಕ್ಕೆ ಪಯಣಿಸಲು ಹರ್ಮನ್‌ಪ್ರೀತ್‌ ಕೌರ್‌ ಪಡೆ ಯೋಚಿಸುತ್ತಿದೆ.
ಭಾರತೀಯ ವನಿತಾ ತಂಡ ಉತ್ತಮ ಫಾರ್ಮ್ನಲ್ಲಿದೆ. ತಂಡದ ಉಪನಾಯಕಿ ಮತ್ತು ಸ್ಟಾರ್‌ ಆಟಗಾರ್ತಿ ಸ್ಮತಿ ಮಂಧನಾ ಅಮೋಘವಾಗಿ ಆಡುತ್ತಿದ್ದಾರೆ. ಅವರಲ್ಲದೇ ಶಫಾಲಿ ಶರ್ಮ, ಜೆಮಿಮಾ, ರಿಚಾ ಘೋಷ್‌, ನಾಯಕಿ ಕೌರ್‌ ಈ ಹಿಂದಿನ ಏಕದಿನ ಮತ್ತು ಟೆಸ್ಟ್‌ನಲ್ಲಿ ಉತ್ತಮ ನಿರ್ವಹಣೆ ನೀಡಿದ್ದಾರೆ. ತಂಡದ ಬೌಲಿಂಗ್‌ ಕೂಡ ಉತ್ತಮ ಸ್ಥಿತಿಯಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next