Advertisement

ಭಾರತ – ದ.ಆಫ್ರಿಕಾ ಸೆಕೆಂಡ್ ಟೆಸ್ಟ್: ಮತ್ತೆ ಮಿಂಚಿದ ಮಯಾಂಕ್ ಶತಕದಾಟ

10:10 AM Oct 11, 2019 | sudhir |

ಪುಣೆ: ಇಲ್ಲಿ ನಡೆಯುತ್ತಿರುವ ಭಾರತ ಮತ್ತು ಪ್ರವಾಸಿ ದಕ್ಷಿಣ ಆಫ್ರಿಕಾ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಭಾರತ ಉತ್ತಮ ಸ್ಥಿತಿಯಲ್ಲಿದೆ. ಟಾಸ್ ಗೆದ್ದ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಆಯ್ಕೆಮಾಡಿಕೊಂಡರು.

Advertisement

ಮಯಾಂಕ್ ಮತ್ತು ರೋಹಿತ್ ಅವರು ತಂಡದ ಇನ್ನಿಂಗ್ಸ್ ಪ್ರಾರಂಭಿಸಿದರು. ಆದರೆ ಕಳೆದ ಪಂದ್ಯದ ಶತಕ ವೀರ ರೋಹಿತ್ ಶರ್ಮಾ (14) ವೇಗಿ ರಬಾಡ ಅವರಿಗೆ ಬೇಗನೇ ವಿಕೆಟ್ ಒಪ್ಪಿಸಿ ಹೊರನಡೆದರು. 25 ರನ್ ಗಳಾಗುವಷ್ಟರಲ್ಲಿ ಟೀಂ ಇಂಡಿಯಾ ತನ್ನ ಮೊದಲನೇ ವಿಕೆಟ್ ಕಳೆದುಕೊಂಡಿತ್ತು.

ಆದರೆ ಬಳಿಕ ಮಯಾಂಕ್ ಅಗರ್ವಾಲ್ ಅವರಿಗೆ ಜೊತೆಯಾದ ಟೆಸ್ಟ್ ಸ್ಪೆಷಲಿಸ್ಟ್ ಬ್ಯಾಟ್ಸ್ ಮನ್ ಚೇತೇಶ್ವರ ಪುಜಾರ (58) ನಿಧಾನವಾಗಿ ತಂಡದ ಮೊತ್ತವನ್ನು ಏರಿಸುತ್ತಾ ಸಾಗಿದರು. ಇವರಿಬ್ಬರ ಜೊತೆಯಾಟ 138 ರನ್ ಗಳವರೆಗೆ ಬೆಳೆಯಿತು. ಈ ಸಂದರ್ಭದಲ್ಲಿ ಪುಜಾರ ಅರ್ಧಶತಕ ಬಾರಿಸಿದರೆ ಮಯಾಂಕ್ ಈ ಸರಣಿಯಲ್ಲಿ (108) ರನ್ ಕಲೆಹಾಕಿ ರಬಾಡ ಅವರಿಗೆ ವಿಕೆಟ್ ಒಪ್ಪಿಸಿ ಶತಕದಾಟದೊಂದಿಗೆ ಮತ್ತೆ ಮಿಂಚಿದ್ದಾರೆ.

ನಂತರ ಬಂದ ವಿರಾಟ್ ಕೊಹ್ಲಿ (63) ಹಾಗೂ ರಹಾನೆ (18) ರಂಗಳೊಂದಿಗೆ ತಂಡವನ್ನು ಮುನ್ನಡೆಸುವುದರೊಂದಿಗೆ ತಂಡದ ಮೊತ್ತ 3 ವಿಕೆಟ್ ನಷ್ಟಕ್ಕೆ 273 ರನ್ ಗಳನ್ನು ಕಲೆಹಾಕಿದೆ.

Advertisement

Udayavani is now on Telegram. Click here to join our channel and stay updated with the latest news.

Next