ಮಣಿಪಾಲ: ಕಳೆದ ಹಣಕಾಸು ಅವಧಿಯಲ್ಲಿ ಭಾರತ ಆರ್ಥಿಕ ಪ್ರಗತಿ ಕುಠಿಂತಗೊಂಡಿದೆ ಎಂದು ವಿಶ್ವ ಬ್ಯಾಂಕ್ ನ ವರದಿಯಲ್ಲಿ ಹೇಳಿದೆ.
ಜಿಡಿಪಿಯಲ್ಲಿ 1 ಅಂಕ ಕಳೆದುಕೊಂಡಿರುವ ಭಾರತ 7ನೇ ಸ್ಥಾನಕ್ಕೆ ಇಳಿದಿದೆ. ಭಾರತ ಈ ವರ್ಷ ನಿರೀಕ್ಷೆಯಂತೆ 5ನೇ ಸ್ಥಾನವನ್ನು ಅಲಂಕರಿಸಬೇಕಿತ್ತು.
ಭಾರತ 5 ವರ್ಷಗಳಲ್ಲಿ ಅತ್ಯಂತ ನಿಧಾನಗತಿಯ ಎಕನಾಮಿಯನ್ನು ಹೊಂದಿದೆ ಎಂದು ವಿಶ್ವ ಬ್ಯಾಂಕ್ ಹೇಳಿದೆ. 2018-19ರ ಆರ್ಥಿಕ ವರ್ಷದಲ್ಲಿ ವಿತ್ತೀಯ ಪ್ರಮಾಣ 7.1ರಿಂದ 6.8ಕ್ಕೆ ಕುಸಿದಿದೆ. 2018ರಲ್ಲಿ ಭಾರತವು ಫ್ರಾನ್ಸ್ ಮತ್ತು ಇಂಗ್ಲೆಂಡ್ ಬಳಿದ 7ನೇ ಸ್ಥಾನವನ್ನು ಅಲಂಕರಿಸಿದೆ. 2018ರಲ್ಲಿ ಭಾರತ 2.72 ಜಿಡಿಪಿ ಕಂಡುಕೊಂಡಿತ್ತು. ಜತೆಗೆ ಇಂಗ್ಲೆಂಡ್ 2.82 ಮತ್ತು ಫ್ರಾನ್ಸ್ 2.77 ಡಿಜಿಪಿ ಸಾಧಿಸಿದೆ.
ಭಾರತದ ನಂತರದ ಸ್ಥಾನದಲ್ಲಿ ಇಟಲಿ, ಬ್ರೆಜಿಲ್, ಕೆನಡಾ, ರಷ್ಯಾ, ಕೊರಿಯಾ, ಆಸ್ಟ್ರೇಲಿಯಾ, ಸ್ಪೇನ್ ಮತ್ತು ಮೆಕ್ಸಿಕೋ ಇದೆ.
ವಿಶ್ವ ಬ್ಯಾಂಕ್ ಪ್ರಕಾರ ಜಗತ್ತಿನ 4 ಆರ್ಥಿಕ ಬಲಿಷ್ಠ ರಾಷ್ಟ್ರಗಳ ಪೈಕಿ ಅಮೆರಿಕ 20 ಜಿಡಿಪಿಯೊಂದಿಗೆ ಅಗ್ರಸ್ಥಾನದಲ್ಲಿದೆ. ದ್ವಿತೀಯ ಸ್ಥಾನದಲ್ಲಿ 13.6 ಹೊಂದಿರುವ ಚೀನ ಇದೆ. ಬಳಿಕದ ಸ್ಥಾನದಲ್ಲಿ 4.9 ಸಾಧಿಸಿರುವ ಜಪಾನ್, ನಾಲ್ಕನೇ ಅತೀ ದೊಡ್ಡ ರಾಷ್ಟ್ರವಾಗಿ 3.9 ಹೊಂದಿರುವ ಜರ್ಮನಿ ಇದೆ.
ಭಾರತ ಈ 3 ಲಕ್ಷ ಕೋಟಿ ಜಿಡಿಪಿ ಮೌಲ್ಯದ ಸನಿಹದಲ್ಲಿದ್ದು, 2024ರ ಸುಮಾರಿಗೆ 5 ಲಕ್ಷ ಕೋಟಿ (5 ಟ್ರಿಲಿಯನ್) ಸಾಧಿಸುವ ಗುರಿ ಹೊಂದಿತ್ತು. ಆದರೆ ಈ ಅಂಕಿ ಅಂಶ ನಿರಾಸೆ ಮೂಡಿಸಿದೆ ಎಂದು ಹೇಳಲಾಗುತ್ತಿದೆ.
2017ರಲ್ಲಿ ಭಾರತ 2.65 ಹೊಂದಿತ್ತು. ಬಳಿಕದ ಸ್ಥಾನದಲ್ಲಿ 2.64 ಹೊಂದಿದ್ದ ಇಂಗ್ಲೆಂಡ್ ಹಾಗೂ 2.59 ಸಾಧಿಸಿದ್ದ ಫ್ರಾನ್ಸ್ ಇತ್ತು. ಆದರೆ ಈ ವರ್ಷ ಈ ಎರಡು ರಾಷ್ಟ್ರ ಭಾರತವನ್ನು ಹಿಂದಿಕ್ಕಿದೆ. ಕಳೆದ ವರ್ಷದ ಕೊನೆಯಾರ್ಧದಲ್ಲಿ ಅತೀ ವೇಗದಲ್ಲಿರುವ ಎಕನಾಮಿಯ ಪಟ್ಟಿಯಿಂದ ಹೊರ ಬಿದ್ದಿತ್ತು.