Advertisement
ಹೌದು, ವಿಶ್ವದ ಅತಿ ಜನನಿಬಿಡ ರಾಷ್ಟ್ರ ಎಂಬ ಖ್ಯಾತಿ ಗಳಿಸಿರುವ ಚೀನದಲ್ಲಿ ಕಳೆದ 6 ದಶಕಗಳಲ್ಲಿ ಇದೇ ಮೊದಲ ಬಾರಿಗೆ ಜನಸಂಖ್ಯೆ ಇಳಿಮುಖವಾಗಿದೆ.
Related Articles
ಕಳೆದ ವರ್ಷ ಚೀನದ ಜನಸಂಖ್ಯೆ 1.426 ಶತಕೋಟಿ ಆಗಿದ್ದರೆ, ಭಾರತದ್ದು 1.412 ಶತಕೋಟಿಯಾಗಿತ್ತು. ಈಗ ಚೀನದಲ್ಲಿ ಜನರ ಸಂಖ್ಯೆ ಇಳಿಮುಖವಾಗುತ್ತಿರುವ ಕಾರಣ, ಏಪ್ರಿಲ್ ವೇಳೆಗೆ ಭಾರತವು ಚೀನವನ್ನು ಮೀರಿಸಿ, ಜಗತ್ತಿನ ಜನಭರಿತ ರಾಷ್ಟ್ರ ಎಂಬ ಹೆಗ್ಗಳಿಕೆ ಗಳಿಸಲಿದೆ. 2030ರವರೆಗೂ ಭಾರತವು ಜಗತ್ತಿನಲ್ಲೇ ಅತಿ ಹೆಚ್ಚು “ಯುನ ಜನರು’ ಇರುವ ದೇಶವಾಗಿ ಮುಂದುವರಿಯಲಿದೆ ಎಂದು ವಿಶ್ವಸಂಸ್ಥೆಯ ವರದಿ ಹೇಳಿದೆ.
Advertisement
2022ರಲ್ಲಿ ಭಾರತದ ಜನಸಂಖ್ಯೆ- 1.412 ಶತಕೋಟಿ2022ರಲ್ಲಿ ಚೀನದ ಜನಸಂಖ್ಯೆ – 1.426 ಶತಕೋಟಿ
2050ರ ವೇಳೆಗೆ ಭಾರತದ ಜನಸಂಖ್ಯೆ- 1.668 ಶತಕೋಟಿ
2050ರ ವೇಳೆಗೆ ಚೀನದ ಜನಸಂಖ್ಯೆ- 1.317 ಶತಕೋಟಿ ಭಾರತಕ್ಕೆ ಎಚ್ಚರಿಕೆಯ ಕರೆಗಂಟೆ
ಚೀನ ಕೈಗೊಂಡ ಕಠಿಣ ಜನಸಂಖ್ಯಾ ನಿಯಂತ್ರಣ ಕ್ರಮಗಳೇ ಅದಕ್ಕೆ ಮುಳುವಾಗಿ ಪರಿಣಮಿಸಿತು. ಇದು ಭಾರತಕ್ಕೂ ಎಚ್ಚರಿಕೆಯ ಕರೆಗಂಟೆ. ಏಕೆಂದರೆ, ಈಗಾಗಲೇ ಸಿಕ್ಕಿಂ, ಗೋವಾ, ಜಮ್ಮು ಮತ್ತು ಕಾಶ್ಮೀರ, ಕೇರಳ, ಪುದುಚೇರಿ, ಪಂಜಾಬ್, ಲಡಾಖ, ಪಶ್ಚಿಮ ಬಂಗಾಳ ಮತ್ತು ಲಕ್ಷದ್ವೀಪಗಳು ಕೂಡ ಹಿರಿಯ ನಾಗರಿಕರ ಜನಸಂಖ್ಯೆ ಹೆಚ್ಚಳದ ಸವಾಲನ್ನು ಎದುರಿಸುತ್ತಿವೆ. ಈ ರಾಜ್ಯಗಳಲ್ಲಿ ದುಡಿಯಲು ಶಕ್ತರಾದ ಜನರ ಕೊರತೆ, ಫಲವತ್ತತೆ ದರ ಕುಸಿತದಂಥ ಸಮಸ್ಯೆಗಳೂ ಕಾಣಿಸಿಕೊಂಡಿವೆ. ಹೀಗಾಗಿ, ಜನಸಂಖ್ಯೆ ನಿಯಂತ್ರಣಕ್ಕಾಗಿ ಕೈಗೊಳ್ಳುವ ಕ್ರಮಗಳು ತಿರುಗುಬಾಣವಾಗುವ ಸಾಧ್ಯತೆಯಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.