Advertisement

ಮೇ ನಲ್ಲಿ ಭಾರತಕ್ಕೆ ತಲುಪಲಿವೆ ರಷ್ಯಾದ 2 ಲಕ್ಷ ಸ್ಪುಟ್ನಿಕ್ ವಿ ಲಸಿಕೆಗಳು: ವೆಂಕಟೇಶ್ ವರ್ಮಾ

06:23 PM Apr 30, 2021 | Team Udayavani |

ನವ ದೆಹಲಿ : ಕಳೆದೆರಡು ದಿನಗಳ ಹಿಂದೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾರತಕ್ಕೆ ಸ್ಪುಟ್ನಿಕ್ ವಿ ಲಸಿಕೆಯನ್ನು ನೀಡುವುದಾಗಿ ಭರವಸೆ ನೀಡಿದ ಬೆನ್ನಿಗೆ,  ಮೇ ಆರಂಭದ ವಾರದಲ್ಲಿ ರಷ್ಯಾ ಮೂಲದ ಸ್ಪುಟ್ನಿಕ್ ವಿ ಲಸಿಕೆ ಭಾರತಕ್ಕೆ ತಲುಪಲಿದೆ ಎಂಬ ವರದಿಯಾಗಿದೆ.

Advertisement

ಈ ಬಗ್ಗೆ ಮಾಹಿತಿ ನೀಡಿದ ರಷ್ಯಾದ ಭಾರತೀಯ ರಾಯಭಾರಿ ಬಾಲ ವೆಂಕಟೇಶ್ ವರ್ಮಾ, “ಮೇ ಆರಂಭದಲ್ಲಿ 150,000 ರಿಂದ 200,000 ಸ್ಪುಟ್ನಕ್ ವಿ ಲಸಿಕೆಗಳನ್ನು ತಲುಪುವ ಸಾಧ್ಯತೆ ಎಂದು ಹೇಳಿದ್ದಾರೆ.

ಮೇ ತಿಂಗಳ ಎರಡನೇ  ಹಾಗೂ ಕೊನೆಯ ವಾರಗಳಲ್ಲಿ ಇದರ ಪ್ರಮಾಣ  ಹೆಚ್ಚಳಾಗಬಹುದು ಎಂದು ಕೂಡ ಅವರು ತಿಳಿಸಿದ್ದಾರೆ.

ಜೂನ್‌ ನಲ್ಲಿ  5 ಮಿಲಿಯನ್‌ಗೆ, 10 ಮಿಲಿಯನ್‌  ಸ್ಪುಟ್ನಿಕ್ ಲಸಿಕೆಗಳನ್ನು ರಷ್ಯಾದಿಂದ ಭಾರತಕ್ಕೆ ತಲುಪುವ ಸಾಧ್ಯತೆ ಇದೆ ಎಂದು ಕೂಡ ಅವರು ಹೇಳಿದ್ದಾರೆ.

ಓದಿ : ಪ್ರಕಟಣೆಯ ಕೃಪೆಗಾಗಿಮಡಿಕೇರಿ ನಗರಸಭೆಯಲ್ಲಿ ಬಿಜೆಪಿ ಜಯಭೇರಿ

Advertisement

ಇನ್ನು, ರಷ್ಯನ್ ಡೈರೆಕ್ಟ್ ಇನ್ವೆಸ್ಟ್ ಮೆಂಟ್ ಫಂಡ್ ಅಥವಾ ರಷ್ಯಾದ ನೇರ ಹೂಡಿಕೆ ನಿಧಿ (ಆರ್‌ ಡಿ ಐ ಎಫ್) 5 ಭಾರತೀಯ ಕಂಪನಿಗಳೊಂದಿಗೆ 850 ದಶಲಕ್ಷ ಪ್ರಮಾಣದ ಲಸಿಕೆ ಉತ್ಪಾದಿಸುವ ಒಪ್ಪಂದಕ್ಕೆ ಸಹಿ ಹಾಕಿದೆ. ಮೇ ತಿಂಗಳಲ್ಲಿ ಉತ್ಪಾದನೆ ಪ್ರಾರಂಭವಾಗುತ್ತದೆ. ಭಾರತ ನಿರ್ಮಿಸಿದ ರಷ್ಯಾದ ಲಸಿಕೆ ಭಾರತ ಮತ್ತು ರಷ್ಯಾದಲ್ಲಿ ಮಾತ್ರವಲ್ಲದೆ ಇತರೆ  ದೇಶಗಳಿಗೂ ರಫ್ತು ಮಾಡಲಾಗುವುದು. “ಮುಂದಿನ ತಿಂಗಳುಗಳಲ್ಲಿ ಶೇಕಡಾ 60 ರಿಂದ 70 ಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಸ್ಪುಟ್ನಿಕ್ ವಿ ಲಸಿಕೆ ಭಾರತದಲ್ಲಿ ಉತ್ಪಾದನೆಯಾಗುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ” ಎಂದು ಅವರು ಹೇಳಿದ್ದಾರೆ.

ಇನ್ನು, ಲಸಿಕೆಗಳ ಉತ್ಪಾದನೆಗೆ ಸಂಬಂಧಿಸಿದಂತೆ ಆರ್‌ ಡಿ ಐ ಎಫ್ ಭಾರತೀಯ ನಿಯಂತ್ರಕರೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ಕೂಡ ಅವರು ತಿಳಿಸಿದ್ದಾರೆ.

ಇನ್ನು ಈ ವಾರದ ಆರಂಭದಲ್ಲಿ ರಷ್ಯಾ ಭಾರತಕ್ಕೆ 20 ಆಮ್ಲಜನಕ ಉತ್ಪಾದನಾ ಘಟಕಗಳು, 75  ವೆಂಟಿಲೇಟರ್‌ಗಳು, 150 ಮೆಡಿಕಲ್ ಮಾನಿಟರ್‌ ಗಳು ಮತ್ತು 200,000 ಪ್ಯಾಕ್ ಔಷಧಿಗಳನ್ನು ಕೋವಿಡ್ ನಿಯಂತ್ರಣಕ್ಕಾಗಿ ಕಳುಹಿಸಿಕೊಟ್ಟಿದೆ. ಈ “ನೆರವು ಭಾರತ ಮತ್ತು ರಷ್ಯಾ ನಡುವಿನ ನಿಕಟ ಸ್ನೇಹಕ್ಕಾಗಿ ಮತ್ತೊಂದು ಸಾಕ್ಷಿಯಾಗಿ ನಮ್ಮ ನೆನಪಿನಲ್ಲಿ ಉಳಿಯುತ್ತದೆ ಎಂದು ಹೇಳಿದ್ದಾರೆ.

ಓದಿ : ಕೋವಿಡ್ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಬರೆದರೆ ತಪ್ಪೇನು? ಸುಪ್ರೀಂ ಚಾಟಿ

Advertisement

Udayavani is now on Telegram. Click here to join our channel and stay updated with the latest news.

Next