Advertisement

ದಶಕದ ಬೆಳವಣಿಗೆ ಕಂಡ ಸೇವಾ ಕ್ಷೇತ್ರ: ಪಿಎಂಐ

08:56 PM Dec 03, 2021 | Team Udayavani |

ನವದೆಹಲಿ: ದೇಶದ ಸೇವಾ ಕ್ಷೇತ್ರ ಕಳೆದ ತಿಂಗಳು ಶರವೇಗದ ಅಭಿವೃದ್ಧಿಯನ್ನು ದಾಖಲಿಸಿದೆ.

Advertisement

ಹತ್ತು ವರ್ಷಗಳಿಗೆ ಹೋಲಿಕೆ ಮಾಡಿದರೆ ಸೇವಾ ವಲಯವು ಎರಡನೇ ಬಾರಿಗೆ ಕ್ಷಿಪ್ರ ಬೆಳವಣಿಗೆ ದಾಖಲಿಸಿ ದಂತಾಗಿದೆ ಎಂದು ಪರ್ಚೇಸಿಂಗ್‌ ಮ್ಯಾನೇಜರ್ಸ್‌ ಇಂಡೆಕ್ಸ್‌ (ಪಿಎಂಐ)ನ ವರದಿ ಹೇಳಿದೆ.

ಸೋಂಕಿನ ಕರಾಳ ಛಾಯೆಯಿಂದ ಸೇವಾ ಕ್ಷೇತ್ರ, ಮಾರುಕಟ್ಟೆಯಲ್ಲಿನ ವಿವಿಧ ವಾಣಿಜ್ಯಿಕ ವಹಿವಾಟುಗಳು, ಸೇವೆಗಳಲ್ಲಿ ಚೇತರಿಕೆ ಕಾಣಿಸಿಕೊಂಡಿದ್ದರಿಂದ ಪಿಎಂಐ ಸೂಚ್ಯಂಕ 58.1ಕ್ಕೆ ಏರಿಕೆಯಾಗಿದೆ.

ಆದರೆ ಅಕ್ಟೋಬರ್‌ಗೆ ಹೋಲಿಸಿದರೆ ನವೆಂಬರ್‌ನಲ್ಲಿ ಸ್ವಲ್ಪಮಟ್ಟಿಗೆ ಇಳಿಕೆಯಾಗಿದೆ. ಅಕ್ಟೋಬರ್‌ನಲ್ಲಿ ಸೂಚ್ಯಂಕ 58.4 ಆಗಿತ್ತು. 2011ರ ಜುಲೈಗೆ ಹೋಲಿಕೆ ಮಾಡಿದರೆ, ಈ ಸಾಂಖ್ಯಿಕ ಮಾಹಿತಿ ಎರಡನೇ ಅತ್ಯಂತ ದಾಖಲೆಯ ಏರಿಕೆ. ನವೆಂಬರ್‌ನ ಮಾಹಿತಿ ಗಮನಿಸಿದಾಗ, ಸತತ ನಾಲ್ಕನೇ ಬಾರಿಗೆ ಸೂಚ್ಯಂಕದಲ್ಲಿ ಏರಿಕೆಯಾಗಿದೆ.

ಇದನ್ನೂ ಓದಿ:ಸೂರಜ್‌ ರೇವಣ್ಣ ನಾಮಪಪತ್ರ ಪ್ರಶ್ನಿಸಿ ಅರ್ಜಿ: ಸರಕಾರ, ಆಯೋಗಕ್ಕೆ ನೋಟಿಸ್‌

Advertisement

ಸೋಂಕಿನ ಸಂಖ್ಯೆ ಹೆಚ್ಚುತ್ತಿರುವುದರಿಂದಲಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತೀಯ ಸೇವಾ ಕ್ಷೇತ್ರಕ್ಕೆ ಕೊಂಚ ಹಿನ್ನಡೆ ಉಂಟಾಗಿದೆ.

ಪಿಎಂಐ ಸೂಚ್ಯಂಕದಲ್ಲಿ 50 ಪಾಯಿಂಟ್ಸ್‌ಗಳಿಗಿಂತ ಹೆಚ್ಚಿದ್ದರೆ ಸೂಚ್ಯಂಕ ಏರಿಕೆಯಾಗಿದೆ ಮತ್ತು 50ಕ್ಕಿಂತ ಕೆಳಗೆ ಇದ್ದರೆ ಅದು ಕುಸಿದಿದೆ ಎಂದು ವಿಶ್ಲೇಷಿಸಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next