ನವದೆಹಲಿ:ದಾಖಲೆ ಪ್ರಮಾಣದಲ್ಲಿ ಭಾರತದಲ್ಲಿ ಕಳೆದ 24ಗಂಟೆಯಲ್ಲಿ 10,956 ಕೋವಿಡ್ 19 ವೈರಸ್ ಪ್ರಕರಣ ಪತ್ತೆಯಾಗಿದ್ದು, 397 ಕೋವಿಡ್ ರೋಗಿಗಳು ಸಾವನ್ನಪ್ಪಿದ್ದಾರೆ. ಇದರೊಂದಿಗೆ ಒಟ್ಟಾರೆ ಸೋಂಕಿತರ ಪ್ರಮಾಣ 2.9 ಲಕ್ಷ ದಾಟಿದೆ.
ಕಳೆದ ಹತ್ತು ದಿನದಲ್ಲಿ ಸತತವಾಗಿ 9000 ಸಾವಿರ ಕೋವಿಡ್ ಪ್ರಕರಣ ವರದಿಯಾಗುತ್ತಿದೆ. ಕೋವಿಡ್ 19 ಸೋಂಕು ಹರಡಲು ಆರಂಭವಾದಾಗಿನಿಂದ ಈವರೆಗೆ ಭಾರತದಲ್ಲಿ 5 ಮಿಲಿಯನ್ ಗಿಂತಲೂ ಹೆಚ್ಚು ಜನರು ಕೋವಿಡ್ 19 ಪರೀಕ್ಷೆಗೆ ಒಳಗಾಗಿದ್ದಾರೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಆರೋಗ್ಯ ಸಚಿವಾಲಯದ ಅಂಕಿ ಅಂಶದ ಪ್ರಕಾರ, 24ಗಂಟೆಯಲ್ಲಿ 10,956 ಪ್ರಕರಣ ಹಾಗೂ 396 ಮಂದಿ ಸಾವನ್ನಪ್ಪಿದ್ದಾರೆ. ದೇಶದಲ್ಲಿ ಮಾರಣಾಂತಿಕ ಕೋವಿಡ್ 19 ವೈರಸ್ ಗೆ ಈವರೆಗೆ 8,498 ಜನರು ಸಾವನ್ನಪ್ಪಿದ್ದಾರೆ. ಗುರುವಾರ ಬೆಳಗ್ಗೆ 8ಗಂಟೆವರೆಗೆ ಒಟ್ಟು ಕೋವಿಡ್ 19 ಸೋಂಕಿತರ ಪ್ರಕರಣ 2,97,535ಕ್ಕೆ ಏರಿಕೆಯಾಗಿದೆ ಎಂದು ವರದಿ ವಿವರಿಸಿದೆ.
ಇದರಲ್ಲಿ ಅತೀ ಹೆಚ್ಚು ಮಂದಿ ಸಾವನ್ನಪ್ಪಿರುವುದು ಮಹಾರಾಷ್ಟ್ರದಲ್ಲಿ. ಪ್ರಸ್ತುತ ದೇಶದಲ್ಲಿ ಮಹಾರಾಷ್ಟ್ರ ಕೋವಿಡ್ ಹಾಟ್ ಸ್ಪಾಟ್ ಆಗಿದ್ದು ಈವರೆಗೆ 97,648 ಪ್ರಕರಣ ವರದಿಯಾಗಿದೆ, 3,590ಮಂದಿ ಸಾವನ್ನಪ್ಪಿದ್ದಾರೆ.
ದೇಶದಲ್ಲಿ 2.9 ಲಕ್ಷ ಕೋವಿಡ್ ಪ್ರಕರಣ ದಾಖಲಾಗಿದೆ. ಇದರಲ್ಲಿ 1,37,448 ಜನರು ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದು, 1,47,194 ಜನರು ಚೇತರಿಸಿಕೊಂಡು ಆಸ್ಪತ್ರೆಯಿಂದ ಡಿಸ್ ಚಾರ್ಜ್ ಆಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.