Advertisement

2021ರಲ್ಲೂ ಮುಂದುವರಿಯಲಿದೆ ಕೋವಿಡ್, ಎರಡನೇ ಹಂತದಲ್ಲಿ ಅಪ್ಪಳಿಸಲಿದೆ ಸೋಂಕು: ತಜ್ಞರ ವರದಿ

03:58 PM Sep 05, 2020 | keerthan |

ಹೊಸದಿಲ್ಲಿ: ದೇಶದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಭಾರಿ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ. ಪ್ರತಿ ದಿನ 60 ಸಾವಿರಕ್ಕ ಹೆಚ್ಚು ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಸೋಂಕಿತರ ಮರಣ ಪ್ರಮಾಣವೂ ಏರಿಕೆ ಕಾಣುತ್ತಿದೆ. ಇದರ ಮಧ್ಯೆಯೇ ಕೋವಿಡ್ -19 ಸೋಂಕಿನ ಉಪಟಳ ಮುಂದಿನ ವರ್ಷವೂ ಮುಂದುವರಿಯಲಿದೆ ಎಂದು ತಜ್ಞ ವೈದ್ಯರು ಹೇಳಿದ್ದಾರೆ.

Advertisement

ಎಐಐಎಂ ನಿರ್ದೇಶಕ ಡಾ. ರಣದೀಪ್ ಗುಲೇರಿಯಾ ಅವರು ಈ ಮಾಹಿತಿ ನೀಡಿದ್ದು,  2021ರಲ್ಲಿ ದೇಶದ ಕೆಲವು ಕಡೆ ಎರಡನೇ ಹಂತದಲ್ಲಿ ಕೋವಿಡ್-19 ಅಪ್ಪಳಿಸಲಿದೆ ಎಂದು ಹೇಳಿದ್ದಾರೆ. 2021ರಲ್ಲೂ ಕೋವಿಡ್-19 ಸೋಂಕು ಯಾಕೆ ಕಡಿಮೆ ಆಗುವುದಿಲ್ಲ ಎನ್ನುವುದಕ್ಕೆ ಕಾರಣ ನೀಡಿರುವ ಡಾ. ರಣದೀಪ್ ಗುಲೇರಿಯಾ,  ಸೋಂಕು ಹರಡುವಿಕೆ ಮೊದಲು ದೊಡ್ಡ ನಗರಗಳಲ್ಲಿ ಮಾತ್ರ ಇತ್ತು. ಈಗ ಅದು ಚಿಕ್ಕ ಪಟ್ಟಣ ಮತ್ತು ಗ್ರಾಮಗಳಿಗೂ ವಿಸ್ತರಿಸಿದೆ. ಅಲ್ಲದೆ ನಮ್ಮ ದೇಶದಲ್ಲಿ ಜನಸಂಖ್ಯೆ ಕೂಡ ಹೆಚ್ಚಾಗಿದೆ. ಆದುದರಿಂದ ಸೋಂಕಿತರ ಹೆಚ್ಚುತ್ತಲೇ ಇರುತ್ತದೆ. ಕೋವಿಡ್ ಕಂಟಕ ಯಾವಾಗ ಮುಗಿಯುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ

ದೇಶದಲ್ಲಿ ಮೊದಲ ಕೋವಿಡ್ ಪ್ರಕರಣ ಕಂಡು ಬಂದಿದ್ದು ಜನವರಿ 30ರಂದು. ಮೊದಲ ಪ್ರಕರಣದಿಂದ 10 ಲಕ್ಷ‌ ಸೋಂಕು ಪೀಡಿತರು ದೇಶದಲ್ಲಿ ಪತ್ತೆಯಾಗಲು 168 ದಿನ‌ ಬೇಕಾಯಿತು. ಆದರೆ 10 ಲಕ್ಷದಿಂದ 40 ಲಕ್ಷ ಆಗಿದ್ದು ಕೇವಲ 50 ದಿನದಲ್ಲಿ. ಇದು ಆಘಾತಕಾರಿಯಾಗಿದೆ.

ದೇಶದಲ್ಲಿ ಶುಕ್ರವಾರ ಒಂದೇ ದಿನ 86,432 ಪ್ರಕರಣಗಳು ಪತ್ತೆಯಾಗಿದೆ. ಇದರಿಂಧ ಕೋವಿಡ್ ಸೋಂಕಿತರ ಒಟ್ಟು ಸಂಖ್ಯೆ 40,23,179ಕ್ಕೆ ಏರಿಕೆಯಾಗಿದೆ. ಅದಲ್ಲದೆ ಕಳೆದ 24 ಗಂಟೆಯ ಅವಧಿಯಲ್ಲಿ 1089 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next