Advertisement
ಹೌದು, ಕಳೆದ ವಾರ ನಡೆದ ಭಾರತ ಮತ್ತು ರಷ್ಯಾದ ರಾಷ್ಟ್ರೀಯ ಭದ್ರತಾ ಸಲಹೆಗಾರ ಮಟ್ಟದ ಸಭೆಯಲ್ಲಿ ಈ ಕುರಿತು ಸುದೀರ್ಘ ಚರ್ಚೆಗಳು ನಡೆದಿವೆ. ಬ್ರಹ್ಮೋಸ್ ಅಥವಾ ಬ್ರಹ್ಮೋಸ್-2 ಕ್ಷಿಪಣಿಯ ಹೈಪರ್‌ಸಾನಿಕ್ ಆವೃತ್ತಿಯನ್ನು ಜಂಟಿಯಾಗಿ ಅಭಿವೃದ್ಧಿಪಡಿಸುವ ಕುರಿತು ಅಜಿತ್ ದೋವಲ್ ಮತ್ತು ರಷ್ಯಾ ಎನ್‌ಎಸ್‌ಎ ನಿಕೋಲಾಯ್ ಪಟ್ರಾಶೆವ್ ಮಾತುಕತೆ ನಡೆಸಿದ್ದಾರೆ. ಹೈಪರ್‌ಸಾನಿಕ್ ಕ್ಷಿಪಣಿಗಳ ನಿರ್ಮಾಣದಲ್ಲಿ ರಷ್ಯಾವು ಅಮೆರಿಕ ಹಾಗೂ ಇತರೆ ಪಾಶ್ಚಿಮಾತ್ಯ ದೇಶಗಳಿಗಿಂತಲೂ ಮುಂದಿದೆ.
ಭಾರತೀಯ ನೌಕಾಸೇನೆ ಇನ್ನಷ್ಟು ಬಲಿಷ್ಠಗೊಳ್ಳಲು ಸಜ್ಜಾಗಿದೆ. ಅದೇ ಕಾರಣದಿಂದ 2,465 ಕೋಟಿ ರೂ. ವೆಚ್ಚದಲ್ಲಿ ಅಮೆರಿಕದಿಂದ ಹೆಲ್‌ಫೈರ್ ಕ್ಷಿಪಣಿಗಳು, ಎಂಕೆ 54 ಹೆಸರಿನ ಲಘುತೂಕದ ಟಾಪೆìಡೊಗಳನ್ನು (ಸಬ್‌ಮರಿನ್ ನಾಶಗೊಳಿಸುವ ಸಾಧನ) ತರಿಸಿಕೊಳ್ಳಲು ತೀರ್ಮಾನಿಸಿದೆ. ಅತ್ಯಾಧುನಿಕ ಯದ್ಧಸಾಧಗಳಾದ ಇವು ಭಾರತೀಯ ನೌಕಾಸೇನೆಯ ಬಲವನ್ನು ಇನ್ನೊಂದು ಎತ್ತರಕ್ಕೆ ಏರಿಸಲಿವೆ. ಸದ್ಯ ಭಾರತೀಯ ನೌಕಾ ಸೇನೆ ಎಂಎಚ್ 60 ರೋಮಿಯೊ ಹೆಸರಿನ 24 ಚಾಪರ್‌ಗಳನ್ನು ಹೊಂದಿದೆ.
Related Articles
ಕ್ಷಿಪ್ರ ವೇಗದಲ್ಲಿ ಅಂದರೆ ಶಬ್ದದ ವೇಗಕ್ಕಿಂತ 5 ಪಟ್ಟು ಅಧಿಕ ವೇಗದಲ್ಲಿ ಸಂಚರಿಸುವಂಥ ಸುಧಾರಿತ ಸೇನಾ ತಂತ್ರಜ್ಞಾನವನ್ನು ಹೈಪರ್‌ಸಾನಿಕ್ ಶಸ್ತ್ರಾಸ್ತ್ರ ವ್ಯವಸ್ಥೆ ಎನ್ನುತ್ತಾರೆ. ತ್ವರಿತವಾಗಿ ಮಾರ್ಗ ಬದಲಿಸಲು, ಶತ್ರುಗಳ ರಕ್ಷಣಾ ವ್ಯವಸ್ಥೆಯನ್ನು ಛಿದ್ರಗೊಳಿಸಲು, ಅತಿ ಕಡಿಮೆ ಅವಧಿಯಲ್ಲಿ ಬಹಳ ದೂರ ತಲುಪಲು ಸಾಧ್ಯವಾಗುವಂತೆ ಈ ವ್ಯವಸ್ಥೆಯನ್ನು ಬಹಳ ಕುಶಲತೆಯಿಂದ ಅಭಿವೃದ್ಧಿಪಡಿಸಲಾಗುತ್ತದೆ.
Advertisement