Advertisement

ಐಸಿಸಿ ಟೆಸ್ಟ್‌ ರ್‍ಯಾಂಕಿಂಗ್‌: ನಂ.1 ಸ್ಥಾನ ಕಾಯ್ದುಕೊಂಡ ಭಾರತ

10:45 AM Sep 08, 2017 | Team Udayavani |

ದುಬೈ: ಹೊಸ ಐಸಿಸಿ ರ್‍ಯಾಂಕಿಂಗ್‌ ಪಟ್ಟಿ ಬಿಡುಗಡೆಯಾಗಿದ್ದು, ಭಾರತ ನಂ.1 ರ್‍ಯಾಂಕ್‌ ಕಾಯ್ದುಕೊಂಡಿದೆ. ಬಾಂಗ್ಲಾ ಸರಣಿಯಲ್ಲಿ ಮೊದಲ ಪಂದ್ಯದಲ್ಲಿ ಸೋತ ಆಸ್ಟ್ರೇಲಿಯ ನಂ.5ನೇ ಸ್ಥಾನಕ್ಕೆ ಕುಸಿದಿದೆ. ಶ್ರೀಲಂಕಾ ವಿರುದ್ಧ ನಡೆದ ಟೆಸ್ಟ್‌ ಸರಣಿ ಯಲ್ಲಿ ಭಾರತ 3-0 ದಿಂದ ಜಯ ಸಾಧಿಸಿರುವುದರಿಂದ ನಂ.1ನೇ ರ್‍ಯಾಂಕನ್ನು ಕಾಯ್ದುಕೊಳ್ಳಲು ನೆರವಾಗಿದೆ. ಭಾರತ 125 ಅಂಕವನ್ನು ಹೊಂದಿದೆ. ಆಸ್ಟ್ರೇಲಿಯ ತಂಡ 4ನೇ ಸ್ಥಾನದಿಂದ 5ನೇ ಸ್ಥಾನಕ್ಕೆ ಕುಸಿದಿದೆ. ದಕ್ಷಿಣ ಆಫ್ರಿಕಾ, ಇಂಗ್ಲೆಂಡ್‌, ನ್ಯೂಜಿಲ್ಯಾಂಡ್‌ 2, 3 ಮತ್ತು 4ನೇ ಸ್ಥಾನ ಪಡೆದಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next