ನವದೆಹಲಿ: ಕೇಂದ್ರ ಸರ್ಕಾರದ ನಿರ್ಧಾರದಂತೆ ನೇಪಾಳ, ಬಾಂಗ್ಲಾದೇಶ, ಮ್ಯಾನ್ಮಾರ್ ಹಾಗೂ ಇರಾನ್ ಗೆ ಕೋವಿಡ್ 19 ಲಸಿಕೆ ರಫ್ತು ಮಾಡುವುದನ್ನು ಪುನರಾರಂಭಿಸಲಾಗುವುದು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಗುರುವಾರ(ಅಕ್ಟೋಬರ್ 14) ತಿಳಿಸಿದೆ.
ಇದನ್ನೂ ಓದಿ:ಉಪಚುನಾವಣೆ ಬಿಜೆಪಿ ವಿರುದ್ಧ ಕೋಪ, ತಾಪ ತೀರಿಸಿಕೊಳ್ಳಲು ಅವಕಾಶ: ಡಿಕೆಶಿ
ಪ್ರಾಥಮಿಕವಾಗಿ ನೆರೆಯ ದೇಶಗಳಿಗೆ ಕೋವಿಡ್ 19 ಲಸಿಕೆ ರಫ್ತು ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಾಮ್ ಬಾಗ್ಚಿ ತಿಳಿಸಿದ್ದಾರೆ.
ಕೋವಿಡ್ 19 ಲಸಿಕೆಯ ಸರಬರಾಜನ್ನು ಪುನರಾರಂಭಿಸಲಾಗುವುದು ಎಂದು ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವಸಂಸ್ಥೆಯ ಮಹಾಅಧಿವೇಶನದಲ್ಲಿ ಹೇಳಿದ್ದರು. ಆ ನಿಟ್ಟಿನಲ್ಲಿ ನೆರೆಯ ದೇಶಗಳಿಗೆ ಕೋವಿಡ್ ಲಸಿಕೆ ರಫ್ತು ಮಾಡಲು ನಿರ್ಧರಿಸಿರುವುದಾಗಿ ಬಾಗ್ಚಿ ಹೇಳಿದರು.
ಈಗಾಗಲೇ ನೇಪಾಳ, ಬಾಂಗ್ಲಾದೇಶ, ಮ್ಯಾನ್ಮಾರ್ ಮತ್ತು ಇರಾನ್ ಗೆ ಕೋವಿಡ್ 19 ಲಸಿಕೆಯನ್ನು ರಫ್ತು ಮಾಡಲಾಗಿದೆ. ನಾವು ನಿರಂತರವಾಗಿ ಕೋವಿಡ್ ಸ್ಥಿತಿಯನ್ನು ಪರಿಶೀಲಿಸುತ್ತಿದ್ದೇವೆ ಎಂದು ಪ್ರಧಾನಿ ಮೋದಿ ತಿಳಿಸಿದ್ದರು.