ನವದೆಹಲಿ: ಭಾರತದಲ್ಲಿ ಬುಧವಾರ ಕೋವಿಡ್ ಪ್ರಕರಣಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಕಳೆದ 7 ತಿಂಗಳಿನಲ್ಲೇ ಇಷ್ಟು ದೊಡ್ಡ ಮಟ್ಟದಲ್ಲಿ ಕೋವಿಡ್ ಸೋಂಕು ಪತ್ತೆಯಾಗಿರುವುದು ಇದೇ ಮೊದಲು.
ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ ಬುಧವಾರ 7,830 ಮಂದಿಯಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದೆ. ದಿನದ ಪಾಸಿಟಿವ್ ದರ 3.65% ದ್ದಷ್ಟು ದಾಖಲಾಗಿದೆ. ವಾರದ ಪಾಸಿಟಿವ್ ದರವು 3.83% ರಷ್ಟು ದಾಖಲಾಗಿದೆ. ಪ್ರಸ್ತುತ, ದೇಶದಲ್ಲಿ 40,215 ಸಕ್ರಿಯ ಕೋವಿಡ್ ಪ್ರಕರಣಗಳಿವೆ.
ಇದನ್ನೂ ಓದಿ: ಮಾರಿಕಾಂಬಾ ದೇವಾಲಯದಲ್ಲಿ ಬಿ ಫಾರಂ ಅರ್ಪಿಸಿ ಪೂಜೆ ಸಲ್ಲಿಸಿದ H. D. Kumaraswamy
ಇನ್ನು 16 ಮಂದಿ ಮೃತಪಟ್ಟಿದ್ದು ದೆಹಲಿ, ಪಂಜಾಬ್ ಮತ್ತು ಹಿಮಾಚಲ ಪ್ರದೇಶದಲ್ಲಿ ತಲಾ ಇಬ್ಬರು ಮತ್ತು ಗುಜರಾತ್, ಹರಿಯಾಣ, ಮಹಾರಾಷ್ಟ್ರ, ತಮಿಳುನಾಡು ಮತ್ತು ಉತ್ತರ ಪ್ರದೇಶದಲ್ಲಿ ತಲಾ ಒಬ್ಬರು ಮತ್ತು ಐವರು ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ 5,31,016 ಕ್ಕೆ ಏರಿದೆ.
ದೇಶದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ 4.47 ಕೋಟಿ (4,47,76,002) ಇದೆ. ಕಳೆದ ಸಪ್ಟೆಂಬರ್ ಒಂದೇ ದಿನದಲ್ಲಿ 7,946 ಮಂದಿಗೆ ಕೋವಿಡ್ ಕಾಣಿಸಿಕೊಂಡಿತ್ತು.
ರೋಗದಿಂದ ಚೇತರಿಸಿಕೊಂಡವರ ಸಂಖ್ಯೆ 4,42,04,771 ಕ್ಕೆ ಏರಿದೆ. ಆದರೆ ಪ್ರಕರಣದ ಸಾವಿನ ಪ್ರಮಾಣವು ಶೇಕಡಾ 1.19 ರಷ್ಟಿದೆ ಎಂದು ಅಂಕಿಅಂಶಗಳು ತೋರಿಸಿವೆ.