ನವ ದೆಹಲಿ : ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಒಟ್ಟು 45,352 ಹೊಸ ಕೋವಿಡ್ ಸೋಂಕಿನ ಪ್ರಕರಣಗಳು ದಾಖಲಾಗಿದ್ದು, ಸೋಂಕಿನಿಂದ ಕಳೆದೊಂದು ದಿನದಲ್ಲಿ 366 ಮಂದಿ ಸಾವನ್ನಪ್ಪಿರುವುದಾಗಿ ಇಂದು (ಸಪ್ಟೆಂಬರ್ 3, ಶುಕ್ರವಾರ) ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
34, 791 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದು, 3,99,778 ಸೋಂಕಿನ ಸಕ್ರಿಯ ಪ್ರಕರಣಗಳಿವೆ. ದೇಶದಾದ್ಯಂತ ಒಟ್ಟು ಸೋಂಕಿನ ಸಂಖ್ಯೆ 3,29,03,289 ಕ್ಕೆ ಏರಿಕೆಯಾಗಿದೆ. ಇನ್ನು, ಈವರೆಗೆ ಸೋಂಕಿನಿಂದ ದೇಶದಲ್ಲಿ 4,39,895 ಮಂದಿ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ : ಸರಕಾರಿ ಬಂಗಲೆಗಾಗಿ ಏಳು ಪತ್ರ ಬರೆದಿದ್ದೇನೆ, ಸರಕಾರದ ಮುಂದೆ ಭಿಕ್ಷೆ ಬೇಡುವುದಿಲ್ಲ: ಹೊರಟ್ಟಿ
ಇನ್ನು, ದೇಶದಲ್ಲಿ ವಾರದ ಪಾಸಿಟಿವಿಟಿ ರೇಟ್ ಶೇಕಡಾ. 2.66 ರಷ್ಟಿದ್ದರೇ, ದೈನಂದಿನ ಪಾಸಿಟಿವಿಟಿ ರೇಟ್ 2.72 ರಷ್ಟಿದೆ ಎಂದು ಕೂಡ ಸಚಿವಾಲಯ ಮಾಹಿತಿ ನೀಡಿದೆ. ಕೇರಳವೊಂದರಲ್ಲಿ ಕಳೆದೊಂದು ದಿನದಲ್ಲಿ 32,097 ಹೊಸ ಕೋವಿಡ್ ಸೋಂಕಿನ ಪ್ರಕರಣಗಳು ದಾಖಲಾಗಿದ್ದು, ಸೋಂಕಿನಿಂದ ಕೇರಳವೊಂದರಲ್ಲಿ 188 ಮಂದಿ ಬಲಿಯಾಗಿದ್ದಾರೆ.
ಈವರೆಗೆ 52,65,35,068 ಕೋವಿಡ್ ಸೋಂಕಿನ ಟೆಸ್ಟ್ ಗಳನ್ನು ಮಾಡಲಾಗಿದ್ದು, ನಿನ್ನೆ ಒಂದೇ ದಿನದಲ್ಲಿ 16,66,334 ಮಂದಿಗೆ ದೇಶದಾದ್ಯಂತ ಕೋವಿಡ್ ಟೆಸ್ಟ್ ಗಳನ್ನು ಮಾಡಲಾಗಿದೆ ಎಂದಿದೆ. ಲಸಿಕಾ ಅಭಿಯಾನದಡಿಯಲ್ಲಿ 67.09 ಕೋಟೊ ಲಸಿಕಾ ಡೋಸ್ ಗಳನ್ನು ದೇಶದಾದ್ಯಂತ ನೀಡಲಾಗಿದೆ ಎಂದು ಕೂಡ ಸವಿವಾಲಯ ತಿಳಿಸಿದೆ.
ಇದನ್ನೂ ಓದಿ : ರಾಜ್ಯ ಭಾಷೆಯಾಗಿ ತುಳು : ಅಧಿವೇಶನದಲ್ಲಿ ಮೊಳಗಲಿದೆ ಕರಾವಳಿಯ ಕೂಗು !