ನವದೆಹಲಿ: ಭಾರತದಲ್ಲಿ ದಿನೇ ದಿನೇ ಕೋವಿಡ್ ಸೋಂಕಿನ ಸಂಖ್ಯೆ ಹೆಚ್ಚಾಗುತ್ತಿದೆ. ಇಷ್ಟು ದಿನ 2 ಸಾವಿರ ಗಡಿದಾಟಿದ್ದ ಕೋವಿಡ್ ಸೋಂಕು ಇದೀಗ 3 ಸಾವಿರ ಗಡಿದಾಟಿದೆ.
ಕಳೆದ 24 ಗಂಟೆಗಳಲ್ಲಿ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ, 3,823 ಹೊಸ ಕೋವಿಡ್ -19 ಪ್ರಕರಣಗಳು ಪತ್ತೆಯಾಗಿದೆ. ಶನಿವಾರ ( ಮಾ. ಏ. 1ರಂದು) 2,994 ಕೋವಿಡ್ ಸೋಂಕು ಪತ್ತೆಯಾಗಿತ್ತು. ಇದರೊಂದಿಗೆ ಸಕ್ರಿಯ ಪ್ರಕರಣಗಳ ಸಂಖ್ಯೆ 16,354 ಕ್ಕೆ ಏರಿದೆ.
ಇದನ್ನೂ ಓದಿ: ದೇವಸ್ಥಾನ ಜೀರ್ಣೋದ್ದಾರ ವೇಳೆ: ಚೋಳರಕಾಲದ 65 ಚಿನ್ನದ ನಾಣ್ಯ ಪತ್ತೆ
ಇನ್ನು ಚೇತರಿಕೆಯ ಪ್ರಮಾಣ 98.77 ರಷ್ಟಿದೆ. ದೈನಂದಿನ ಪಾಸಿಟಿವ್ ಪ್ರಮಾಣ ಶೇ.2.87 ರಷ್ಟಿದೆ. ಕಳೆದ 24 ಗಂಟೆಗಳಲ್ಲಿ 1,784 ಮಂದಿ ಚೇತರಿಕೆ ಆಗಿದ್ದಾರೆ. ಇದರೊಂದಿಗೆ ಒಟ್ಟು ಚೇತರಿಕೆ ಪ್ರಮಾಣ 4,41,73,335 ಕ್ಕೆ ಹೆಚ್ಚಿದೆ.
ಸಚಿವಾಲಯದ ವೆಬ್ಸೈಟ್ ಪ್ರಕಾರ, ರಾಷ್ಟ್ರವ್ಯಾಪಿ ವ್ಯಾಕ್ಸಿನೇಷನ್ ಡ್ರೈವ್ ಅಡಿಯಲ್ಲಿ ಇದುವರೆಗೆ 220.66 ಕೋಟಿ ಲಸಿಕೆಯನ್ನು ನೀಡಲಾಗಿದೆ.