Advertisement

World Cup: ವಿಶ್ವಕಪ್‌ ಗೆದ್ದ ಆಸ್ಟ್ರೇಲಿಯ ನೆನಪಿನಲ್ಲುಳಿದ ಭಾರತ

11:50 PM Nov 19, 2023 | Team Udayavani |

ಭಾರತವೇ ಆತಿಥ್ಯ ವಹಿಸಿದ್ದ  ಕ್ರಿಕೆಟ್‌ ವಿಶ್ವಕಪ್‌ ಮುಗಿದಿದೆ. ಆರಂಭದಿಂದ ಫೈನಲ್‌ವರೆಗೆ ಅಜೇಯವಾಗಿ ಬಂದಿದ್ದ ಭಾರತ, ದುರದೃಷ್ಟವಶಾತ್‌ ಫೈನಲ್‌ನಲ್ಲಿ ಆಸ್ಟ್ರೇಲಿಯ ವಿರುದ್ಧ ಸೋತಿದೆ. ಈ ವಿಶ್ವಕಪ್‌ನಲ್ಲಿ ಭಾರತದ ಸಾಧನೆ ಅವಿಸ್ಮರಣೀಯ. ಸಾಂ ಕ ಪ್ರದರ್ಶನದ ಕಾರಣದಿಂದಾಗಿ ಇಡೀ ಲೀಗ್‌ನಲ್ಲಿ ಒಂದೇ ಒಂದು ಪಂದ್ಯ ಸೋಲದೇ ಅಜೇಯವಾಗಿ ಮುನ್ನಡೆದಿತ್ತು. ಜತೆಗೆ ಇಡೀ ವಿಶ್ವಕಪ್‌ನಲ್ಲಿನ ಪ್ರದರ್ಶನಕ್ಕಾಗಿ ರೋಹಿತ್‌ ಶರ್ಮ ಹುಡುಗರಿಗೆ ಶಹಬ್ಟಾಸ್‌ ಹೇಳಲೇಬೇಕು.

Advertisement

ಆದರೆ ಅಹ್ಮದಾಬಾದ್‌ ಬೌಲಿಂಗ್‌ಗೆ ನೆರವಾಗಲಿದೆ ಎಂಬುದು ಎಲ್ಲರಿಗೂ ಗೊತ್ತಿದ್ದ ವಿಚಾರವೇ. ಹೀಗಾಗಿ ಇಲ್ಲಿ ಯಾರೇ ಟಾಸ್‌ ಗೆದ್ದಿದ್ದರೂ ಬೌಲಿಂಗ್‌ ಅನ್ನೇ ಆರಿಸಿಕೊಳ್ಳುತ್ತಿದ್ದರು. ಇದಕ್ಕೆ ಕಾರಣ ಮೊದಲು ಬ್ಯಾಟಿಂಗ್‌ ಮಾಡುವುದು ಇಲ್ಲಿ ಕಷ್ಟಕರವಾಗಿತ್ತು. ಹೀಗಾಗಿಯೇ ಆಸ್ಟ್ರೇಲಿಯ ನಾಯಕ ಪ್ಯಾಟ್‌ ಕಮಿನ್ಸ್‌ ಬೌಲಿಂಗ್‌ ಅನ್ನೇ ಆರಿಸಿಕೊಂಡರು. ಇದಕ್ಕೆ ಪೂರಕವೆಂಬಂತೆ, ಆರಂಭದಲ್ಲೇ ಆಸ್ಟ್ರೇಲಿಯ ಬೌಲರ್‌ಗಳು ಮೇಲುಗೈ ಸಾಧಿಸಿದರು. ನಾಯಕ ರೋಹಿತ್‌ ಶರ್ಮ, ವಿರಾಟ್‌ ಕೊಹ್ಲಿ ಮತ್ತು ಕೆ.ಎಲ್‌.ರಾಹುಲ್‌ ಅವರು ತಂಡಕ್ಕೆ ಆಸರೆಯಾಗಿ ನಿಂತರು. ಆದರೆ ಶುಭಮನ್‌ ಗಿಲ್‌ ಮತ್ತು ಶ್ರೇಯಸ್‌ ಅಯ್ಯರ್‌ ಅವರ ಬ್ಯಾಟಿಂಗ್‌ ವೈಫ‌ಲ್ಯ ಬಹುವಾಗಿ ಕಾಡಿತು.

ಆದರೆ ಈ ಕೂಟದಲ್ಲಿ ಆಸ್ಟ್ರೇಲಿಯದ ಸಾಧನೆಯನ್ನು ಅವಗಣಿಸುವಂತಿಲ್ಲ. ಆರಂಭದ ಎರಡು ಪಂದ್ಯಗಳಲ್ಲಿ ಸೋತಿದ್ದು ಬಿಟ್ಟರೆ, ಅನಂತರದ ಎಲ್ಲ ಪಂದ್ಯಗಳಲ್ಲಿಯೂ ಅದು ಗಮನಾರ್ಹ ಪ್ರದರ್ಶನ ನೀಡಿ ಫೈನಲ್‌ವರೆಗೆ ಬಂದಿತು. ತಾನಾಡಿದ

ಮೊದಲ ಪಂದ್ಯದಲ್ಲೇ ಭಾರತದ ವಿರುದ್ಧ ಆಸ್ಟ್ರೇಲಿಯ ಹೀನಾಯವಾಗಿ ಸೋತಿತ್ತು. ಬಳಿಕ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲೂ ಸೋತಿತ್ತು. ಆಗ ಪ್ಯಾಟ್‌ ಕಮಿನ್ಸ್‌ ಬಗ್ಗೆ ಮತ್ತು ಆಸ್ಟ್ರೇಲಿಯ ಆಟಗಾರರ ಬಗ್ಗೆ ಹಲವಾರು ಟೀಕೆಗಳು ವ್ಯಕ್ತವಾಗಿದ್ದವು. ಮೊದಲೆರಡು ಪಂದ್ಯ ಬಿಟ್ಟರೆ ಅನಂತರ ಆಸ್ಟ್ರೇಲಿಯ ಮುಟ್ಟಿದ್ದೆಲ್ಲವೂ ಚಿನ್ನ. ಲೀಗ್‌ನ 7, ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ಸೋಲಿಸಿ ಫೈನಲ್‌ಗೇರಿತು.

ಫೈನಲ್‌ನ ಪಂದ್ಯದಲ್ಲಿ ಆರಂಭದಲ್ಲಿ ಮೂರು ವಿಕೆಟ್‌ ಕಳೆದುಕೊಂಡರೂ, ಆಸ್ಟ್ರೇಲಿಯದ ಟ್ರಾವಿಸ್‌ ಹೆಡ್‌ ಮತ್ತು ಲುಬುಶೇನ್‌ ಉತ್ತಮವಾಗಿಯೇ ಆಡಿ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾದರು. ಫೈನಲ್‌ನಲ್ಲಿ ಸೆಂಚುರಿ ಬಾರಿಸಿದ ಹೆಡ್‌ ಆಸ್ಟ್ರೇಲಿಯ ಪಾಲಿಗೆ ಹೀರೋ ಆದರು. ಹೀಗಾಗಿ ಅವರಿಗೆ ಅಭಿನಂದನೆ ಹೇಳಲೇಬೇಕು.

Advertisement

ಇಡೀ ಕೂಟ ಕೆಲವು ವಿವಾದಗಳ ಹೊರತಾಗಿಯೂ ಉತ್ತಮವಾಗಿಯೇ ನಡೆದಿದೆ. ಭಾರೀ ಪ್ರದರ್ಶನ ನೀಡುತ್ತವೆ ಎಂಬ ನಿರೀಕ್ಷೆಯಲ್ಲಿದ್ದ ತಂಡಗಳು, ಲೀಗ್‌ ಹಂತದಲ್ಲೇ ಕೈಚೆಲ್ಲಿ ಹೋಗಿವೆ. ಹಿಂದಿನ ಚಾಂಪಿಯನ್‌ ಇಂಗ್ಲೆಂಡ್‌ ತೀರಾ

ಕಳಪೆ ಪ್ರದರ್ಶನ ನೀಡಿತು. ಪಾಕಿಸ್ಥಾನ ಕೂಡ ಸೆಮಿಫೈನಲ್‌ಗೆ ಬರಲಾಗಲಿಲ್ಲ. ಅಫ್ಘಾನಿಸ್ಥಾನ, ನೆದರ್ಲೆಂಡ್ಸ್‌ನಂಥ ತಂಡಗಳು ಉತ್ತಮ ಪ್ರದರ್ಶನ ನೀಡಿ, ನೆನಪಿನಲ್ಲಿ ಉಳಿಯುವಂಥ ಆಟ ಆಡಿದವು.

Advertisement

Udayavani is now on Telegram. Click here to join our channel and stay updated with the latest news.

Next