Advertisement

ಭಾರತದಲ್ಲಿ ದಾಖಲೆ ಪ್ರಮಾಣದ ಕೋವಿಡ್ 19 ಪ್ರಕರಣ ಇಳಿಕೆ; 907 ಮಂದಿ ಸಾವು

09:54 AM Jun 29, 2021 | Team Udayavani |

ನವದೆಹಲಿ: ಸುಮಾರು 102 ದಿನಗಳ ಬಳಿಕ ಭಾರತದಲ್ಲಿ ಕೋವಿಡ್ 19 ಸೋಂಕು ಪ್ರಕರಣ ದಾಖಲೆ ಪ್ರಮಾಣದಲ್ಲಿ ಇಳಿಕೆಯಾಗಿದ್ದು, ಕಳೆದ 24ಗಂಟೆಯಲ್ಲಿ 40,000ಕ್ಕಿಂತಲೂ ಕಡಿಮೆ ಪ್ರಮಾಣದಲ್ಲಿ ಪ್ರಕರಣ ವರದಿಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಂಗಳವಾರ(ಜೂನ್ 29) ಬಿಡುಗಡೆ ಮಾಡಿರುವ ಅಂಕಿಅಂಶದಲ್ಲಿ ತಿಳಿಸಿದೆ.

Advertisement

ಇದನ್ನೂ ಓದಿ:ಆಕ್ಷೇಪಾರ್ಹ ಭೂಪಟ: ಟ್ವಿಟರ್ ಇಂಡಿಯಾ ಎಂಡಿ ಮನೀಶ್ ವಿರುದ್ಧ ಎಫ್ ಐಆರ್ ದಾಖಲು

ಕಳೆದ 24ಗಂಟೆಗಳಲ್ಲಿ ದೇಶದಲ್ಲಿ 37,566 ಹೊಸ ಕೋವಿಡ್ 19 ಪ್ರಕರಣ ಪತ್ತೆಯಾಗಿದ್ದು, ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ 5.52ಲಕ್ಷಕ್ಕೆ ಇಳಿಕೆಯಾಗಿದೆ. ವಾರದ ಪಾಸಿಟಿವಿಟಿ ದರ ಸದ್ಯ ಶೇ.2.74ರಷ್ಟಿದ್ದು, ದಿನದ ಪಾಸಿಟಿವಿಟಿ ದರ ಶೇ.2.12ಕ್ಕೆ ಕುಸಿದಿದೆ ಎಂದು ಹೇಳಿದೆ.

24ಗಂಟೆಯಲ್ಲಿ ಕೋವಿಡ್ ನಿಂದ 907ಮಂದಿ ಸಾವನ್ನಪ್ಪಿದ್ದು, 56,994 ಮಂದಿ ಕೋವಿಡ್ ನಿಂದ ಚೇತರಿಸಿಕೊಂಡಿದ್ದಾರೆ. ದೇಶದಲ್ಲಿ ಈವರೆಗೆ ಕೋವಿಡ್ ನಿಂದ ಸಾವನ್ನಪ್ಪಿದವರ ಸಂಖ್ಯೆ 3,97.637ಕ್ಕೆ ಏರಿಕೆಯಾಗಿದೆ. ಒಟ್ಟು ಕೋವಿಡ್ ಸೋಂಕಿತರ ಸಂಖ್ಯೆ 2.93 ಕೋಟಿಗೆ ಏರಿಕೆಯಾಗಿದೆ ಎಂದು ಅಂಕಿ ಅಂಶ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next