ನವದೆಹಲಿ: ಭಾರತದಲ್ಲಿ ಕೋವಿಡ್ ಎರಡನೇ ಅಲೆ ತೀವ್ರಗತಿಯಲ್ಲಿ ಇಳಿಕೆಯಾಗುತ್ತಿದ್ದ, ಕಳೆದ 24ಗಂಟೆಯಲ್ಲಿ 50,848 ಕೋವಿಡ್ ನೂತನ ಪ್ರಕರಣ ಪತ್ತೆಯಾಗಿದೆ. ಅಲ್ಲದೇ ಕೋವಿಡ್ ನಿಂದ 1,358 ಮಂದಿ ಸಾವನ್ನಪ್ಪಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಬುಧವಾರ(ಜೂನ್ 23) ಬಿಡುಗಡೆಗೊಳಿಸಿರುವ ಅಂಕಿಅಂಶದಲ್ಲಿ ತಿಳಿಸಿದೆ.
ಇದನ್ನೂ ಓದಿ:ಕೇಂದ್ರ-ರಾಜ್ಯ ಭಾಗೀದಾರಿಕೆ ಸುಧಾರಣೆಗೆ ಮೂಲ: ಪ್ರಧಾನಿ ನರೇಂದ್ರ ಮೋದಿ
ಕಳೆದ 24ಗಂಟೆಯಲ್ಲಿ 50,848 ಕೋವಿಡ್ ಪ್ರಕರಣ ಪತ್ತೆಯಾಗುವ ಮೂಲಕ ದೇಶದಲ್ಲಿ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ
3,00,28,709ಕ್ಕೆ ಏರಿಕೆಯಾಗಿದೆ ಎಂದು ವಿವರಿಸಿದೆ.
ದೇಶದ ಐದು ಪ್ರಮುಖ ರಾಜ್ಯಗಳಲ್ಲಿ ಗರಿಷ್ಠ ಪ್ರಮಾಣದ ಕೋವಿಡ್ ಪ್ರಕರಣ ವರದಿಯಾಗಿದೆ. ಕೇರಳದಲ್ಲಿ 12,617, ಮಹಾರಾಷ್ಟ್ರದಲ್ಲಿ 8,470, ತಮಿಳುನಾಡಿನಲ್ಲಿ 6,895, ಆಂಧ್ರಪ್ರದೇಶದಲ್ಲಿ 4,169 ಮತ್ತು ಕರ್ನಾಟಕದಲ್ಲಿ 3,709 ಪ್ರಕರಣಗಳು ಪತ್ತೆಯಾಗಿರುವುದಾಗಿ ತಿಳಿಸಿದೆ.
ಶೇ.70.52 ನೂತನ ಕೋವಿಡ್ ಪ್ರಕರಣಗಳು ವರದಿಯಾಗಿದ್ದು ಈ ಐದು ರಾಜ್ಯಗಳಿಂದ, ಅಲ್ಲದೇ ಕೇರಳ ರಾಜ್ಯವೊಂದರಿಂದಲೇ ಶೇ.24.81ರಷ್ಟು ನೂತನ ಕೋವಿಡ್ ಪ್ರಕರಣ ವರದಿಯಾಗಿರುವುದಾಗಿ ವಿವರಿಸಿದೆ.