ಹೊಸದಿಲ್ಲಿ: ಆತ್ಮನಿರ್ಭರ ಭಾರತಕ್ಕೆ ಸಿಕ್ಕಿದ ಯಶಸ್ಸು ಎಂಬಂತೆ ಇದೇ ಮೊದಲ ಬಾರಿಗೆ ಭಾರತದ ಬ್ರಹ್ಮೋಸ್ ಕ್ಷಿಪಣಿಯನ್ನು ಖರೀದಿಸಲು ಫಿಲಿಪ್ಪೀನ್ಸ್ ಮುಂದೆ ಬಂದಿದೆ.
ಶುಕ್ರವಾರ ಫಿಲಿಪ್ಪೀನ್ಸ್‌ನ ರಕ್ಷಣ ಸಚಿವಾಲಯವು ಭಾರತದೊಂದಿಗೆ 374 ದಶಲಕ್ಷ ಡಾಲರ್ ಮೊತ್ತದ ಒಪ್ಪಂದಕ್ಕೆ ಸಹಿ ಹಾಕಿದ್ದು, ಅದರಂತೆ ಸದ್ಯದಲ್ಲೇ ಭಾರತವು ಬ್ರಹ್ಮೋಸ್ ಕ್ಷಿಪಣಿಯನ್ನು ಆ ದೇಶಕ್ಕೆ ರಫ್ತು ಮಾಡಲಿದೆ.
ಭಾರತ -ರಷ್ಯಾದ ಜಂಟಿ ಯೋಜನೆ ಬಿಎಪಿಎಲ್, ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿ ಬ್ರಹ್ಮೋಸ್ ಅನ್ನು ಅಭಿವೃದ್ಧಿ ಪಡಿಸುತ್ತಿದೆ. ಈ ಕ್ಷಿಪಣಿಯನ್ನು ಜಲಾಂತರ್ಗಾಮಿ, ನೌಕೆ, ವಿಮಾನ, ಭೂಪ್ರದೇಶಗಳಿಂದಲೂ ಉಡಾವಣೆ ಮಾಡಬಹುದು.
ಇದನ್ನೂ ಓದಿ:10-15 ಜನ ಕಾಂಗ್ರೆಸ್ ತೊರೆಯಲಿದ್ದಾರೆ: ಆರ್.ಅಶೋಕ್
ಎಂಕೆ 3 ಸೇರ್ಪಡೆ: ಈ ನಡುವೆ, ನೌಕಾಪಡೆಯ ಅಂಡಮಾನ್ ಮತ್ತು ನಿಕೋಬಾರ್ ಕಮಾಂಡ್ ಶುಕ್ರವಾರ ದೇಶೀಯವಾಗಿ ನಿರ್ಮಿಸಲಾದ ಸುಧಾರಿತ ಲಘು ಹೆಲಿಕಾಪ್ಟರ್ ಎಂಕೆ 3ಯನ್ನು ಪೋರ್ಟ್‌ಬ್ಲೇರ್‌ನಲ್ಲಿ ರುವ ಐಎನ್‌ಎಸ್ ಉತೊðàಷ್‌ಗೆ ಸೇರ್ಪಡೆಗೊಳಿಸಿದೆ.