ಹೊಸದಿಲ್ಲಿ: ಜಗತ್ತಿನಲ್ಲೇ ಅತಿ ದೊಡ್ಡ ಮುಖ ಗುರುತಿಸುವಿಕೆ ವ್ಯವಸ್ಥೆ (ಫೇಷಿಯಲ್ ರೆಕಗ್ನಿಷನ್ ಸಿಸ್ಟಂ) ಯನ್ನು ಜಾರಿ ಮಾಡಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಚಿಂತನೆ ನಡೆಸುತ್ತಿದೆ.
ದೇಶಾದ್ಯಂತ ಕಣ್ಗಾವಲು ಕೆಮರಾಗಳಲ್ಲಿ ಸೆರೆಯಾದಂಥ ದತ್ತಾಂಶಗಳನ್ನು ಕೇಂದ್ರೀಕರಣಗೊಳಿಸುವಂಥ ಹೊಸ ವ್ಯವಸ್ಥೆ ಅಭಿವೃದ್ಧಿಸಲು ಸರಕಾರ ಚಿಂತನೆ ನಡೆಸಿದ್ದು, ಅದಕ್ಕಾಗಿ ಮುಂದಿನ ತಿಂಗಳೇ ಬಿಡ್ಡಿಂಗ್ ನಡೆಸಲು ನಿರ್ಧರಿಸಿದೆ ಎಂದು ಫಿನಾನ್ಶಿಯಲ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಜನರ ಪಾಸ್‌ಪೋರ್ಟ್‌ನಿಂದ ಬೆರಳ ಚ್ಚುವರೆಗೆ ಎಲ್ಲ ದತ್ತಾಂಶಗಳನ್ನು ಒಳ ಗೊಂಡ ದಾಖಲೆಗಳ ಡೇಟಾಬೇಸ್‌ಗೆ ಇದು ಲಿಂಕ್ ಆಗಿರಲಿದೆ. ಇದ ರಿಂದಾಗಿ ದೇಶದ ಪೊಲೀಸರಿಗೆ ಅಪ ರಾಧಿಗಳನ್ನು ಪತ್ತೆಹಚ್ಚಲು, ನಾಪತ್ತೆ ಯಾದವರನ್ನು ಹುಡುಕಲು ಹಾಗೂ ಮೃತದೇಹಗಳನ್ನು ಗುರುತಿಸಲು ನೆರವಾಗಲಿದೆ ಎಂದೂ ಹೇಳಲಾಗಿದೆ.
ಸರಕಾರದ ಈ ಚಿಂತನೆಯನ್ನು ಕೆಲವರು ಸ್ವಾಗತಿಸಿದರೆ, ಇನ್ನೂ ಕೆಲ ವರು ಖಾಸಗಿತನದ ಪ್ರಶ್ನೆಯೆತ್ತಿ ವಿರೋ ಧವನ್ನೂ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ, ಸರಕಾರದ ಬಿಡ್ಡಿಂಗ್‌ನಲ್ಲಿ ಯಾವ ಕಂಪೆನಿಗಳು ಪಾಲ್ಗೊಳ್ಳ ಬಹುದು ಎಂಬ ಕುರಿತು
ಮಾಹಿತಿ ಲಭ್ಯವಾಗಿಲ್ಲ.