Advertisement
ಪೇಶಾವರದಲ್ಲಿ ದಾಳಿ ನಡೆದಾಗ ಭಾರತದಾದ್ಯಂತ ಶೋಕ ವ್ಯಕ್ತಪಡಿಸಲಾಯಿತು. ಭಾರತದ ಉಭಯ ಸದನಗಳು ಸಂತಾಪ ವ್ಯಕ್ತಪಡಿಸಿದ್ದವು. ಇಡೀ ದೇಶದ ಶಾಲೆಗಳಲ್ಲಿ ಎರಡು ನಿಮಿಷ ಮೌನಾಚರಣೆ ಮಾಡಲಾಗಿತ್ತು. ನೆರೆ ದೇಶವನ್ನು ಅಸ್ಥಿರಗೊಳಿಸಲು ಪಾಕಿಸ್ಥಾನ ಹೆಣೆದ ಉಗ್ರರ ಕೃತ್ಯಗಳಿಂದ ಗಮನ ಬೇರೆಡೆ ಸೆಳೆಯುವ ಪ್ರಯತ್ನವಷ್ಟೇ ಈ ಆರೋಪ ಎಂದು ಈನಂ ಆರೋಪಿಸಿದ್ದಾರೆ.
Related Articles
Advertisement
ಯೋಗಿ ಆದಿತ್ಯನಾಥ, ಆರೆಸ್ಸೆಸ್ ಟಾರ್ಗೆಟ್ಪಾಕ್ ವಿರುದ್ಧ ಸುಷ್ಮಾ ಮಾಡಿದ ವಾಗ್ಧಾಳಿಗೆ ವಿಶ್ವಸಂಸ್ಥೆಯಲ್ಲಿ ಪ್ರತಿಕ್ರಿಯಿಸಿದ ರಾಯಭಾರಿ ಸಾದ್ ವಾರಿಯಾಚ್, ಈ ಭಾಗದಲ್ಲಿ ಉಗ್ರ ಚಟುವಟಿಕೆಗಳಿಗೆ ಆರೆಸ್ಸೆಸ್ಸೇ ಕೇಂದ್ರ. ಹಿಂದೂಗಳೇ ಮೇಲು ಎಂದು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ ಹೇಳುತ್ತಾರೆ, ಅಸ್ಸಾಂನಲ್ಲಿ ಬಂಗಾಲಿಗಳಿಗೆ ನಾಗರಿಕ ಹಕ್ಕು ತಿರಸ್ಕರಿಸಲಾಗುತ್ತಿದೆ ಎಂದು ಪ್ರಲಾಪಿಸಿದ್ದಾರೆ. ಮಹಾತ್ಮನ ಸಂದೇಶ ಇಂದಿಗೂ ಪ್ರಸ್ತುತ
ಕೋಮು ಸೌಹಾರ್ದತೆ ಮತ್ತು ಸಹನೆಯ ಬಗ್ಗೆ ಮಹಾತ್ಮಾ ಗಾಂಧಿಯವರು ಪ್ರತಿಪಾದಿಸುತ್ತಿದ್ದ ಅಂಶ ಹಾಲಿ ದಿನಮಾನಗಳಿಗೂ ಪ್ರಸ್ತುತವಾಗಿದೆ ಎಂದು ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯ ದರ್ಶಿ ಆ್ಯಂಟೋನಿಯೋ ಗುಟೆರಸ್ ಹೇಳಿದ್ದಾರೆ. ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಯಾಗಿ ಅಧಿಕಾರ ಸ್ವೀಕರಿಸಿಕೊಂಡ ಬಳಿಕ ಮೊದಲ ಬಾರಿಗೆ ಸೋಮವಾರದಿಂದ ಅವರು ಭಾರತಕ್ಕೆ 3 ದಿನಗಳ ಭೇಟಿ ನೀಡುತ್ತಿದ್ದಾರೆ. ಜತೆಗೆ ಅ.2ರಂದು ಗಾಂಧಿಯವರ 150ನೇ ಜನ್ಮದಿನವೂ ಆಗಿರುವ ಕಾರಣ, ಈ ಸಂದರ್ಭದಲ್ಲಿಯೇ ಭಾರತ ಪ್ರವಾಸ ಕೈಗೊಳ್ಳುತ್ತಿರುವುದು ಸಂತಸ ತಂದಿದೆ ಎಂದಿದ್ದಾರೆ. ಇಮ್ರಾನ್ ಖಾನ್ ಒಬ್ಬ ಕಾರಕೂನ. ದೇಶವನ್ನು ನಡೆಸುವುದು ಗುಪ್ತಚರ ದಳ, ಸೇನೆ ಹಾಗೂ ಉಗ್ರರು. ಹೀಗಾಗಿ ಪಾಕ್ ಜೊತೆಗೆ ಮಾತುಕತೆ ನಡೆಸುವುದರಲ್ಲಿ ಅರ್ಥವಿಲ್ಲ.
– ಸುಬ್ರಹ್ಮಣ್ಯನ್ ಸ್ವಾಮಿ, ಬಿಜೆಪಿ ಮುಖಂಡ