Advertisement
ಏಶ್ಯ-ಓಶಿಯಾನ ವಲಯ-1 ವಿಭಾಗದ ಈ ಪಂದ್ಯಾವಳಿ ಸೆ. 14 ಮತ್ತು 15ರಂದು ಇಸ್ಲಾಮಾಬಾದ್‌ನಲ್ಲಿ ನಡೆಯಬೇಕಿದೆ. ಆದರೆ ಕಾಶ್ಮೀರ ಬೆಳವಣಿಗೆ ಬಳಿಕ ಎರಡೂ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧ ಇನ್ನಷ್ಟು ಹದಗೆಟ್ಟಿದ್ದು, ಇಸ್ಲಾಮಾಬಾದ್‌ನಲ್ಲಿ ಆಡುವುದು ಸುರಕ್ಷಿತವಲ್ಲ ಎಂಬುದು ಎಐಟಿಎ ಆತಂಕಕ್ಕೆ ಕಾರಣ. ಈ ಪರಿಸ್ಥಿತಿಯನ್ನು ಗಮನಿಸಿ ಕೂಟವನ್ನು ಮುಂದೂಡುವಂತೆ ಅಥವಾ ಸ್ಥಳಾಂತರಿಸುವಂತೆ ಸೂಚಿಸಿತ್ತು. ಇದು ಐಟಿಎಫ್ ಅಸಾಧ್ಯವೆಂದು ಸ್ಪಷ್ಟಪಡಿಸಿದೆ.
ಈ ನಡುವೆ ಭಾರತೀಯ ಡೇವಿಸ್ ಕಪ್ ತಂಡಕ್ಕೆ ಪಾಕಿಸ್ಥಾನದಿಂದ ವೀಸಾ ಲಭಿಸದಿರುವುದು ಕೂಡ ಅಚ್ಚರಿಗೆ ಕಾರಣವಾಗಿದೆ. ಜು. 23ರಂದೇ ಭಾರತದಿಂದ ವೀಸಾ ಪತ್ರ ತಲುಪಿದರೂ ಪಾಕ್ ಇನ್ನೂ ಈ ಪ್ರಕ್ರಿಯೆಯನ್ನು ಪೂರ್ತಿಗೊಳಿಸಿಲ್ಲ.