Advertisement

ಗಡಿಯಲ್ಲಿ ಪಾಕ್ ಉಗ್ರರ ಹುಟ್ಟಡಗಿಸಲು ಭಾರತದ ಯೋಧರಿಗೆ “ವಜ್ರಾಯುಧ’

10:09 AM Mar 29, 2022 | Team Udayavani |

ಭಾರತ-ಪಾಕ್‌ ಗಡಿಯಲ್ಲಿ ಭಾರತೀಯ ಯೋಧರನ್ನು ಮೋಸದಿಂದ ಕೊಲ್ಲುತ್ತಿದ್ದ ಪಾಕಿಸ್ತಾನದ ಉಗ್ರರಿಗೆ ತಕ್ಕ ಪಾಠ ಕಲಿಸುವ ನಿಟ್ಟಿನಲ್ಲಿ ಗಡಿ ಕಾಯುವ ನಮ್ಮ ಯೋಧರಿಗೆ ಫಿನ್ಲಂಡ್‌ನ‌ಲ್ಲಿ ತಯಾರಿಸಲಾದ ಸ್ಯಾಕೋ .338 ಟಿಆರ್‌ಜಿ-42 ಎಂಬ ರೈಫ‌ಲ್‌ಗ‌ಳನ್ನು ನೀಡಲಾಗಿದೆ. ಈ ಹೊಸ ರೈಫ‌ಲ್‌ಗ‌ಳಿಂದಾಗಿ ನಮ್ಮ ಯೋಧರ ಕೈಗೆ ಶತ್ರುಗಳ ಹುಟ್ಟಡಗಿಸಲು “ವಜ್ರಾಯುಧ’ವನ್ನು ಕೊಟ್ಟಂತಾಗಿದೆ.

Advertisement

ಸ್ಯಾಕೋ ರೈಫ‌ಲ್‌ಗ‌ಳ ವಿಶೇಷತೆ
– ದೂರದ ಗುರಿಗಳನ್ನು ಧ್ವಂಸ ಮಾಡಲು ಬಳಸಬಹುದು.
– ಹೆಚ್ಚಿನ ಫೈರ್‌ ಪವರ್‌ ಇರುವಂಥ ರೈಫ‌ಲ್‌ಗ‌ಳು.
– ಟೆಲಿಸ್ಕೋಪಿಂಗ್‌ ಸಾಧನಗಳ ಮೂಲಕ ಗುರಿಯಿಡಲು ಅವಕಾಶ.
– .338 ಲಪುವಾ ಎಂಬ ದೊಡ್ಡ ಗಾತ್ರದ ಗುಂಡುಗಳ ಬಳಕೆ.

ಇವುಗಳ ಅವಶ್ಯಕತೆಯೇನು?
ಕಾವಲು ಪಡೆಯ ಸಿಬ್ಬಂದಿಯನ್ನು ದೂರದಿಂದಲೇ ಅವರಿಗೆ ತಿಳಿಯದಂತೆ ಗುಂಡು ಹಾರಿಸಿ ಹತ್ಯೆಗೈಯ್ಯುವುದನ್ನು ಸ್ನೆ„ಪಿಂಗ್‌ ಎಂದು ಕರೆಯುತ್ತಾರೆ. ಈ ತಂತ್ರಗಾರಿಕೆಗೆ ಅನುಗುಣವಾಗಿ ವಿವಿಧ ರೀತಿಯ ರೈಫ‌ಲ್‌ಗ‌ಳು ಬಳಕೆಯಲ್ಲಿದ್ದು ಸುಮಾರು ಒಂದೂವರೆ ಕಿ.ಮೀ. (1,500 ಮೀ.) ದೂರದಿಂದಲೇ ಗುರಿಯಿಟ್ಟು ದಾಳಿ ನಡೆಸಬಹುದು. ಭಾರತ- ಪಾಕಿಸ್ತಾನ ನಡುವಿನ ಗಡಿ ರೇಖೆ (ಎಲ್‌ಒಸಿ) ಹಾಗೂ ಅಂತಾರಾಷ್ಟ್ರೀಯ ಗಡಿ ರೇಖೆಯ (ಐಬಿ) ಬಳಿ ಇಂಥ ಪ್ರಕರಣಗಳು ಇತ್ತೀಚಿನ ವರ್ಷಗಳಲ್ಲಿ ತೀರಾ ಹೆಚ್ಚಾಗಿದ್ದವು. ಇದರಿಂದ ಪಾರಾಗಲು ಸಶಕ್ತ ರೈಫ‌ಲ್‌ಗ‌ಳ ಅವಶ್ಯತೆಯಿತ್ತು.

ನೇಪಥ್ಯಕ್ಕೆ ಸರಿದ ರೈಫ‌ಲ್‌ಗ‌ಳು
ಸ್ಯಾಕೋ ರೈಫ‌ಲ್‌ಗ‌ಳು, .338 ಲಪುವಾ ಮ್ಯಾಗ್ನಮ್‌ ಸ್ಕಾರ್ಪಿಯೋ ಟಿಜಿಟಿ (ತಯಾರಕರು: ಬೆರೆಟ್ಟಾ), .50 ಕ್ಯಾಲಿಬರ್‌ ಎಂ 95 (ಬೆರೆಟ್ಟಾ) ಎಂಬೆರಡು ರೈಫ‌ಲ್‌ಗ‌ಳನ್ನು ನೇಪಥ್ಯಕ್ಕೆ ಸರಿಸಿದೆ. ಇವರನ್ನು 2019 ಹಾಗೂ 2020ರಲ್ಲಿ ಭಾರತೀಯ ಸೇನಾ ಪಡೆಗಳಲ್ಲಿ ಬಳಕೆಗೆ ತರಲಾಗಿತ್ತು.

1,500 ಮೀ.
– ಸ್ಯಾಕೋ ರೈಫ‌ಲ್‌ಗ‌ಳ ರೇಂಜ್‌

Advertisement

6.55 ಕೆಜಿ
– ಕಾಟ್ರಿಡ್ಜ್ ಹೊರತಾಗಿ ರೈಫ‌ಲ್‌ ತೂಕ

.338 ಲಪುವಾ
– ಸ್ಯಾಕೋ ರೈಫ‌ಲ್‌ಗ‌ಳಲ್ಲಿ ಬಳಸುವ ಗುಂಡುಗಳ ಮಾದರಿ

Advertisement

Udayavani is now on Telegram. Click here to join our channel and stay updated with the latest news.

Next