Advertisement

ಜಾಗತಿಕ ಆರ್ಥಿಕತೆಯಲ್ಲಿ ಬ್ರಿಟನನ್ನೇ ಹಿಂದಿಕ್ಕಿದ ಭಾರತ

12:13 AM Sep 04, 2022 | Team Udayavani |

ಲಂಡನ್‌: ತೀವ್ರ ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟಿರುವ ಯು.ಕೆ. ಈಗ ಜಾಗತಿಕ ಆರ್ಥಿಕತೆಯಲ್ಲಿ ಮತ್ತಷ್ಟು ಮುಗ್ಗರಿಸಿದೆ.

Advertisement

ವಿಶೇಷವೆಂದರೆ, ಭಾರತವು ಯು.ಕೆ.ಯನ್ನು ಹಿಂದಿಕ್ಕಿ ಈ ಪಟ್ಟಿಯಲ್ಲಿ 5ನೇ ಸ್ಥಾನ ಪಡೆದರೆ, ಯು.ಕೆ. 6ನೇ ಸ್ಥಾನಕ್ಕೆ ಕುಸಿದಿದೆ.

2021ರ ಹಣಕಾಸು ವರ್ಷದ ಕೊನೆಯ 3 ತಿಂಗಳಲ್ಲಿ ಭಾರತವನ್ನು ಯು.ಕೆ.ಯನ್ನು ಮೀರಿಸಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ ಹೇಳಿದೆ.

ಪ್ರಸಕ್ತ ವರ್ಷ ಭಾರತದ ಆರ್ಥಿಕ ಪ್ರಗತಿಯು ಶೇ.7 ಅನ್ನು ದಾಟಲಿದೆ ಎಂದೂ ಐಎಂಎಫ್ ಭವಿಷ್ಯ ನುಡಿದಿದೆ. ಜಾಗತಿಕ ಆರ್ಥಿಕತೆಯ ಪಟ್ಟಿಯಲ್ಲಿ ಅಮೆರಿಕ, ಚೀನ, ಜಪಾನ್‌ ಮತ್ತು ಜರ್ಮನಿ ಕ್ರಮವಾಗಿ ಮೊದಲ 4 ಸ್ಥಾನಗಳನ್ನು ಹಂಚಿಕೊಂಡಿವೆ.

Advertisement

Udayavani is now on Telegram. Click here to join our channel and stay updated with the latest news.

Next