Advertisement

ಕೋವಿಡ್ ಕ್ರೌರ್ಯ: ಸ್ಪೇನ್ ಹಿಂದಿಕ್ಕಿ 5ನೇ ಹಾಟ್ ಸ್ಪಾಟ್ ಆದ ಭಾರತ

03:11 PM Jun 07, 2020 | Mithun PG |

ನವದೆಹಲಿ: ಭಾರತದಲ್ಲಿ ಕೋವಿಡ್ -19 ಕ್ರೌರ್ಯ ಮುಂದುವರೆದಿದ್ದು  ಅತೀ ಹೆಚ್ಚು ಸೋಂಕಿತರಿರುವ ಜಗತ್ತಿನ ಟಾಪ್‌ 10 ಕೋವಿಡ್ ಹಾಟ್‌ ಸ್ಪಾಟ್‌ ದೇಶಗಳ ಪೈಕಿ 5ನೇ ಸ್ಥಾನಕ್ಕೆ ತಲುಪಿದೆ. ದೇಶದಲ್ಲಿ ಒಟ್ಟು 2,44,000 ಮಂದಿಗೆ ವೈರಾಣು ತಗುಲಿದ್ದು ಶನಿವಾರ (06-06-2020)  ಸ್ಪೇನ್ ಅನ್ನು ಮೀರಿಸಿ 5ನೇ ಸ್ಥಾನಕ್ಕೆ ಜಿಗಿದಿದೆ.

Advertisement

ಮೊದಲ 4 ಸ್ಥಾನಗಳಲ್ಲಿ ಅಮೆರಿಕಾ, ಬ್ರೆಜಿಲ್, ರಷ್ಯಾ ಮತ್ತು ಯುಕೆ ಇದ್ದು,  ಭಾರತ ಕಳೆದ 24 ಗಂಟೆಗಳ ಅವಧಿಯಲ್ಲಿ ಇಟಲಿಯನ್ನು ಕೂಡ ಮೀರಿಸಿತ್ತು. ಸ್ಪೇನ್ ನಲ್ಲಿ 2,40,978 ಮಂದಿ ಕೋವಿಡ್ ಸೋಂಕಿತರಿದ್ದು, ಭಾರತದಲ್ಲಿ 2.44 ಲಕ್ಷ ವೈರಾಣು ಪೀಡಿತರಿದ್ದಾರೆ.

ಆರೋಗ್ಯ ಸಚಿವಾಲಯದ ವರದಿಯ ಪ್ರಕಾರ ಶನಿವಾರ 9,887 ಕೋವಿಡ್ ಹೊಸ ಪ್ರಕರಣಗಳು ಕಂಡುಬಂದಿದ್ದು, ಮೃತರ ಸಂಖ್ಯೆ 6,642ಕ್ಕೆ ಏರಿಕೆಯಾಗಿತ್ತು. ಭಾರತದಲ್ಲಿ ಸೋಂಕಿತರ ಗುಣಮುಖ ಪ್ರಮಾಣದಲ್ಲಿ ಅತ್ಯಲ್ಪ ಕುಸಿತ ಕಂಡುಬಂದಿದ್ದು, ಭಾರತದಲ್ಲಿ ಶೇ.48.27ರಷ್ಚು ಗುಣಮುಖ ಪ್ರಮಾಣ ಇತ್ತು. ಆದರೆ ಈಗ ಈ ಪ್ರಮಾಣ ಶೇ. 48.20ಕ್ಕೆ ಕುಸಿದಿದೆ.

2,44,00 ಮಂದಿ ಸೋಂಕಿತರ ಪೈಕಿ ಈವರೆಗೆ 1,14, 073 ಮಂದಿ ಗುಣಮುಖರಾಗಿದ್ದು, ಪ್ರಸ್ತುತ ದೇಶದಲ್ಲಿ ಇನ್ನೂ 1,1,5942 ಮಂದಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next