Advertisement

Emerging market ;ಹೂಡಿಕೆಯಲ್ಲಿ ಚೀನಾ ಮೀರಿಸಿದ ಭಾರತ

09:41 PM Jul 10, 2023 | Team Udayavani |

ನವದೆಹಲಿ: ವಿಶ್ವರಾಷ್ಟ್ರಗಳ ಪೈಕಿ ಪ್ರಬಲ ಅಭಿವೃದ್ಧಿಯತ್ತ ಕಾಲಿಡುತ್ತಿರುವ ಭಾರತ ಹೂಡಿಕೆಯಲ್ಲಿ ನೆರೆ ರಾಷ್ಟ್ರ ಚೀನಾವನ್ನೇ ಹಿಂದಿಕ್ಕಿದ್ದು, ಹೂಡಿಕೆಗೆ ಅತ್ಯಂತ ಆಕರ್ಷಕ ಕ್ಷೇತ್ರವಾಗಿ ಹೊರಹೊಮ್ಮಿದೆ.

Advertisement

ಜಗತ್ತಿನ 142 ಮುಖ್ಯ ಹೂಡಿಕೆ ಅಧಿಕಾರಿಗಳು, ವಿಶ್ವದ 85 ಸ್ವತಂತ್ರ ವಿತ್ತೀಯ ನಿಧಿಗಳು, 57 ದೇಶಗಳ ಕೇಂದ್ರೀಯ ಬ್ಯಾಂಕುಗಳ ಅಭಿಪ್ರಾಯವನ್ನು ಒಳಗೊಂಡಿರುವ “ನ್ವೆಸ್ಕೋ ಗ್ಲೋಬರ್‌ ಸಾವರ್ಜಿನ್‌ ಅಸೆಟ್‌ ಮ್ಯಾನೇಜ್‌ಮೆಂಟ್‌ ಸ್ಟಡಿ’ ಎನ್ನುವ ಶೀರ್ಷಿಕೆ ಅನ್ವಯ ಜಾಗತಿಕ ಹೂಡಿಕೆಯ ನಿರ್ವಹಣಾ ಸಂಸ್ಥೆಯ ವರದಿಯಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ.

ಭಾರತವು ಹೂಡಿಕೆದಾರರಿಗೆ ಸ್ನೇಹಪರವಾದ ವಾತವರಣವನ್ನು ನಿರ್ಮಿಸಿದೆ. ಸುಧಾರಿತ ವ್ಯಾಪಾರ, ರಾಜಕೀಯ ಸ್ಥಿರತೆ, ಅನುಕೂಲಕರ ನಿಯಂತ್ರಕ ಉಪಕ್ರಮಗಳು ಸೇರಿದಂತೆ ಹೂಡಿಕೆ ಉತ್ತೇಜಿಸುವ ನಿಟ್ಟಿನಲ್ಲಿ ಅನೇಕ ಕ್ರಮಗಳನ್ನು ಕೈಗೊಂಡಿದೆ. ಇದು ಹೂಡಿಕೆದಾರರನ್ನು ಆಕರ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next