Advertisement
ಭಾರತೀಯ ಡಿಸ್ಟ್ರಿಬ್ಯೂಟರ್ ಗೆ ಚೀನಾ ಕೋವಿಡ್ 19 ಟೆಸ್ಟ್ ಕಿಟ್ಸ್ ಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡಿತ್ತು. ಇದೀಗ ಕಿಟ್ಸ್ ಕಳಪೆ ಎಂದು ಹಲವು ರಾಜ್ಯಗಳು ಆಕ್ಷೇಪ ಎತ್ತುವ ಮೂಲಕ ರಾಪಿಡ್ ಟೆಸ್ಟ್ ಕಿಟ್ಸ್ ಬಳಸುವುದನ್ನು ನಿಲ್ಲಿಸಿವೆ. ಇದೀಗ ಡಿಸ್ಟ್ರಿಬ್ಯೂಟರ್ ಮತ್ತು ಆಮದುದಾರರ ನಡುವೆ ವ್ಯಾಜ್ಯ ಆರಂಭಗೊಂಡು ದಿಲ್ಲಿ ಕೋರ್ಟ್ ಕಟಕಟೆಯೇರಿದ ಘಟನೆ ನಡೆದಿದೆ.
Related Articles
Advertisement
ದುಬಾರಿ ಬೆಲೆಯ ಅಸಲಿ ಕಥೆ ಬಯಲಾಗಿದ್ದು ಹೇಗೆ ಗೊತ್ತಾ?ತಮಿಳುನಾಡು ಸರ್ಕಾರ ಕೂಡಾ ಚೀನಾ ಕಿಟ್ಸ್ ಅನ್ನು 600 ರೂಪಾಯಿಗೆ ಆಮದುದಾರ ಮ್ಯಾಟ್ರಿಕ್ಸ್ ಸಂಸ್ಥೆಯ ಮೂಲಕ ಮತ್ತೊಂದು ಡಿಸ್ಟ್ರಿಬ್ಯೂಟರ್ ಶಾನ್ ಬಯೋಟೆಕ್ ನಿಂದ ಖರೀದಿಸಿತ್ತು. ಆದರೆ ರಿಯಲ್ ಮೆಟಾಬಾಲಿಕ್ಸ್ ಹೈಕೋರ್ಟ್ ಮೆಟ್ಟಿಲೇರಿತ್ತು. ಇದೀಗ ಮ್ಯಾಟ್ರಿಕ್ಸ್ ಸಂಸ್ಥೆ ಮೂಲಕ ಮತ್ತೊಂದು ವಿತರಕ ಸಂಸ್ಥೆ ಶಾನ್ ಬಯೋಟೆಕ್ ಜತೆ ವ್ಯವಹಾರ ನಡೆಸಿರುವುದು ತಮಿಳುನಾಡು ಸರ್ಕಾರ ಒಪ್ಪಂದವನ್ನು ಉಲ್ಲಂಘಿಸಿದಂತಾಗಿದೆ ಎಂದು ಆರೋಪಿಸಿತ್ತು. ಈ ಜಟಾಪಟಿಯ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ದುಬಾರಿ ಬೆಲೆಗೆ ಕಿಟ್ಸ್ ಅನ್ನು ಮಾರಾಟ ಮಾಡುತ್ತಿರುವುದು ಪತ್ತೆ ಹಚ್ಚಿದ್ದು, ಇನ್ಮುಂದೆ ಪ್ರತಿ ಕಿಟ್ಸ್ ಗೆ 400 ರೂಪಾಯಿ ಪಡೆಯುವಂತೆ ನಿರ್ದೇಶನ ನೀಡಿರುವುದಾಗಿ ವರದಿ ತಿಳಿಸಿದೆ.