Advertisement

POK: ಪಾಕ್‌ನ ಬ್ರಿಟನ್‌ ರಾಯಭಾರಿ ಪಿಒಕೆ ಭೇಟಿಗೆ ಭಾರತ ಆಕ್ರೋಶ

12:33 AM Jan 14, 2024 | Team Udayavani |

ಹೊಸದಿಲ್ಲಿ: ಪಾಕಿಸ್ಥಾನದಲ್ಲಿರುವ ಬ್ರಿಟಿಷ್‌ ರಾಯಭಾರಿ ಜೇನ್‌ ಮ್ಯಾರಿ ಯೋಟ್‌ ಪಿಒಕೆಗೆ ಭೇಟಿ ನೀಡಿದ್ದನ್ನು ಕೇಂದ್ರ ವಿದೇಶಾಂಗ ಸಚಿವಾಲಯ ಖಂಡಿಸಿದೆ. ಅವರ ನಡವಳಿಕೆ ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆಗೆ ಧಕ್ಕೆ ತಂದಿದೆ ಎಂದು ಆಕ್ಷೇಪಿಸಿದೆ.

Advertisement

ಪಾಕಿಸ್ಥಾನ ಆಕ್ರಮಿತ ಕಾಶ್ಮೀರದಲ್ಲಿರುವ ಮಿರ್‌ಪುರಕ್ಕೆ ಭೇಟಿ ನೀಡಿದ್ದ ಜೇನ್‌, ಇದು ಪಾಕಿಸ್ಥಾನ ಮತ್ತು ಬ್ರಿಟನ್‌ ಜನರ ನಡುವಿನ ಸಂಬಂಧದ ಹೃದಯಭಾಗ. ಶೇ.70ರಷ್ಟು ಬ್ರಿಟನ್‌ ಪಾಕಿಸ್ಥಾನೀಯರ ಮೂಲ ಇದೇ ಮಿರ್‌ಪುರ. ಇಲ್ಲಿನ ಜನರ ಹಿತಾಸಕ್ತಿಗಾಗಿ ಒಟ್ಟಿಗೆ ಕೆಲಸ ಮಾಡುವುದು ನಿರ್ಣಾಯಕವಾಗಿದೆ ಎಂದಿ ದ್ದರು. ಜಮ್ಮು ಮತ್ತು ಕಾಶ್ಮೀರ, ಲಡಾಖ್‌ ಭಾರತದ ಅವಿ ಭಾಜ್ಯ ಅಂಗ. ಅಂಥದ್ದರಲ್ಲಿ ಪಾಕಿಸ್ಥಾನ ಆಕ್ರಮಿತ ಕಾಶ್ಮೀರಕ್ಕೆ ಜೇನ್‌ ಭೇಟಿ ನೀಡಿದ್ದು ಸಾರ್ವಭೌಮತ್ವಕ್ಕೆ ಧಕ್ಕೆ ತಂದಿದೆ ಎಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next