Advertisement

‘India Open’ ಬ್ಯಾಡ್ಮಿಂಟನ್‌ ಇಂದಿನಿಂದ : ಸಾತ್ವಿಕ್‌-ಚಿರಾಗ್‌ ಮೇಲೆ ಹೆಚ್ಚಿನ ನಿರೀಕ್ಷೆ

11:16 PM Jan 15, 2024 | Team Udayavani |

ಹೊಸದಿಲ್ಲಿ: ಭಾರತದ ಶಟ್ಲರ್‌ಗಳೀಗ ತವರಿನ ಪಂದ್ಯಾವಳಿಗೆ ಸಜ್ಜಾಗುತ್ತಿದ್ದಾರೆ. ಮಂಗಳ ವಾರದಿಂದ ಇಲ್ಲಿ “ಇಂಡಿಯಾ ಓಪನ್‌ ಸೂಪರ್‌ 750′ ಪಂದ್ಯಾವಳಿ ಆರಂಭವಾಗಲಿದ್ದು, ಚಿರಾಗ್‌ ಶೆಟ್ಟಿ-ಸಾತ್ವಿಕ್‌ ಸಾಯಿರಾಜ್‌ ರಾಂಕಿರೆಡ್ಡಿ ಮೇಲೆ ಹೆಚ್ಚಿನ ನಿರೀಕ್ಷೆ ಇರಿಸಿಕೊಳ್ಳಲಾಗಿದೆ.

Advertisement

ನೆಚ್ಚಿನ ಜೋಡಿಯಾಗಿರುವ ಚಿರಾಗ್‌- ಸಾತ್ವಿಕ್‌ ಒಂದು ದಿನದ ಹಿಂದಷ್ಟೇ “ಮಲೇಷ್ಯಾ ಓಪನ್‌ ಸೂಪರ್‌ 1000′ ಪ್ರಶಸ್ತಿಯ ಫೈನಲ್‌ನಲ್ಲಿ ಎಡವಿ ವರ್ಷಾರಂಭದ ಪ್ರಶಸ್ತಿಯಿಂದ ವಂಚಿತರಾಗಿ ದ್ದರು. “ಇಂಡಿಯಾ ಓಪನ್‌’ನಲ್ಲಿ ಚಾಂಪಿಯನ್‌ ಎನಿಸಿಕೊಳ್ಳುವ ಗುರಿ ಇವರದು. 2023ರಲ್ಲಿ ಇವರು 6 ಪ್ರಶಸ್ತಿ ಜಯಿ ಸಿದ್ದನ್ನು ಮರೆಯುವಂತಿಲ್ಲ.
2022ರಲ್ಲಿ ಸಾತ್ವಿಕ್‌-ಚಿರಾಗ್‌, ಲಕ್ಷ್ಯ ಸೇನ್‌ ಅವರು ತವರಿನ ಕೂಟದ ಡಬಲ್ಸ್‌ ಹಾಗೂ ಸಿಂಗಲ್ಸ್‌ ವಿಭಾಗ  ದಲ್ಲಿ ಚಾಂಪಿಯನ್‌ ಆಗಿ ಮೂಡಿಬಂದಿದ್ದರು. ಕಳೆದ ವರ್ಷ ಗಾಯಾಳಾದ ಕಾರಣ ದ್ವಿತೀಯ ಸುತ್ತಿ  ನಿಂದ ಹೊರಗುಳಿಯ ಬೇಕಾ ಯಿತು. ಈ ಬಾರಿ ತೈಪೆಯ ಫಾಂಗ್‌ ಜೆನ್‌ ಲೀ-ಫಾಂಗ್‌ ಚೀ ಲೀ ವಿರುದ್ಧ ಮೊದಲ ಸುತ್ತಿನ ಪಂದ್ಯ ಆಡಲಿದ್ದಾರೆ.

ಎಚ್‌.ಎಸ್‌. ಪ್ರಣಯ್‌, ಲಕ್ಷ್ಯ ಸೇನ್‌, ಕೆ. ಶ್ರೀಕಾಂತ್‌ ಪುರುಷರ ಸಿಂಗಲ್ಸ್‌ನಲ್ಲಿ ಸ್ಪರ್ಧಿಸುವ ತವರಿನ ಪ್ರಮುಖರು. ಆದರೆ ಪಿ.ವಿ. ಸಿಂಧು ಮೊಣ ಕಾಲಿನ ನೋವಿನಿಂದಾಗಿ ಈ ಕೂಟ ದಿಂದ ಹೊರಗುಳಿದಿದ್ದಾರೆ. ವನಿತಾ ಡಬಲ್ಸ್‌ನಲ್ಲಿ ಅಶ್ವಿ‌ನಿ ಪೊನ್ನಪ್ಪ- ತನಿಷಾ ಕ್ರಾಸ್ಟೊ, ಗಾಯತ್ರಿ ಗೋಪಿ ಚಂದ್‌-ಟ್ರೀಸಾ ಜಾಲಿ ಅಂಕಣಕ್ಕಿಳಿಯುವರು.

Advertisement

Udayavani is now on Telegram. Click here to join our channel and stay updated with the latest news.

Next