Advertisement
ಇತ್ತೀಚೆಗಷ್ಟೇ ಆಲ್ ಇಂಗ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಪ್ರಶಸ್ತಿ ಗೆದ್ದ ಚೆನ್ ಯುಫಿ, ಪುರುಷರ ವಿಭಾಗದ ಹಾಲಿ ಚಾಂಪಿಯನ್ ಶಿ ಯುಖಿ ಈ ಕೂಟದ ಪ್ರಮುಖ ಆಕರ್ಷಣೆಯಾಗಲಿದ್ದಾರೆ. ಭಾರತ ಸೈನಾ ನೆಹ್ವಾಲ್, 2017ರ ಚಾಂಪಿಯನ್ ಪಿ.ವಿ. ಸಿಂಧು, 2015ರ ವಿಜೇತ ಕೆ. ಶ್ರೀಕಾಂತ್ ಮೇಲೆ ಭಾರೀ ನಿರೀಕ್ಷೆ ಇರಿಸಿದೆ. ಸಾಯಿ ಪ್ರಣೀತ್, ಪಿ. ಕಶ್ಯಪ್, ಶುಭಂಕರ್ ಡೇ, ಸಮೀರ್ ವರ್ಮ ಕೂಡ ಈ ಕೂಟದಲ್ಲಿ ಅದೃಷ್ಟಪರೀಕ್ಷೆಗೆ ಇಳಿಯಲಿದ್ದಾರೆ.
350,000 ಡಾಲರ್ ಬಹುಮಾನದ ಈ ಕೂಟದಲ್ಲಿ ಚೀನಿ ಆಟಗಾರರ ದೊಡ್ಡ ದಂಡೇ ಸೇರಲಿದೆ. ವನಿತಾ ಸಿಂಗಲ್ಸ್ ಪ್ರಧಾನ ಸುತ್ತಿನಲ್ಲಿ 6 ಮಂದಿ ಚೀನಿ ಆಟಗಾರ್ತಿಯರಿದ್ದಾರೆ. ಹಿ ಬಿಂಗ್‌ಜಿಯಾವೊ, ಹಾನ್ ಯು, ಲೀ ಕ್ಸುರುಯಿ, ಚೆನ್ ಕ್ಸಿಯೋಕ್ಸಿನ್, ಕೈ ಯನ್ಯಾನ್ ಇವರಲ್ಲಿ ಪ್ರಮುಖರು. 2017ರ ಪುರುಷರ ಸಿಂಗಲ್ಸ್ ಚಾಂಪಿಯನ್ ವಿಕ್ಟರ್ ಅಕ್ಸೆಲ್ಸೆನ್ ಕೂಡ ನೆಚ್ಚಿನ ಆಟಗಾರನಾಗಿದ್ದಾರೆ.