Advertisement

ಇಂಡಿಯಾ ಓಪನ್‌ ಬ್ಯಾಡ್ಮಿಂಟನ್‌: ಲಕ್ಷ್ಯ ಸೇನ್‌ಗೆ ಫೈನಲ್‌; ಸಿಂಧು ಫೇಲ್‌

09:36 AM Jan 16, 2022 | Team Udayavani |

ಹೊಸದಿಲ್ಲಿ: ಇಂಡಿಯಾ ಓಪನ್‌ ಬ್ಯಾಡ್ಮಿಂಟನ್‌ನಲ್ಲಿ ಭಾರತದ ಯುವ ಆಟಗಾರ ಲಕ್ಷ್ಯ ಸೇನ್‌ ಫೈನಲ್‌ಗೆ ಲಗ್ಗೆ ಇರಿಸಿದ್ದಾರೆ. ಪುರುಷರ ಡಬಲ್ಸ್‌ ಆಟಗಾರರಾದ ಚಿರಾಗ್‌ ಶೆಟ್ಟಿ-ಸಾತ್ವಿಕ್‌ ಸಾಯಿರಾಜ್‌ ರಾಂಕಿರೆಡ್ಡಿ ಕೂಡ ಪ್ರಶಸ್ತಿ ಸುತ್ತಿಗೆ ನೆಗೆದಿದ್ದಾರೆ. ಆದರೆ ನೆಚ್ಚಿನ ಆಟಗಾರ್ತಿ ಪಿ.ವಿ. ಸಿಂಧು ಸೆಮಿಫೈನಲ್‌ನಲ್ಲಿ ಎಡವಿ ಹೋರಾಟ ಮುಗಿಸಿದ್ದಾರೆ.
ಅಗ್ರ ಶ್ರೇಯಾಂಕದ ಸಿಂಧು ಅವರನ್ನು 6ನೇ ಶ್ರೇಯಾಂಕದ ಥಾಯ್ಲೆಂಡ್‌ ಆಟಗಾರ್ತಿ ಸುಪನಿದಾ ಕಾಟೆತಾಂಗ್‌ 21-14, 13-21, 21-10ರಿಂದ ಮಣಿಸಿದರು.

Advertisement

ಲಕ್ಷ್ಯ-ವ್ಯೂ ಫೈನಲ್‌
ಲಕ್ಷ್ಯ ಸೇನ್‌ ಮಲೇಶ್ಯದ ಎಂಗ್‌ ಟೆ ಯಾಂಗ್‌ ವಿರುದ್ಧದ ಥ್ರಿಲ್ಲಿಂಗ್‌ ಸೆಮಿಫೈನಲ್‌ನಲ್ಲಿ ಮೊದಲ ಗೇಮ್‌ ಕಳೆದುಕೊಂಡು ಗೆಲುವಿನ ಲಯಕ್ಕೆ ಮರಳು ವಲ್ಲಿ ಯಶಸ್ವಿಯಾದರು. 60ನೇ ರ್‍ಯಾಂಕಿಂಗ್‌ ಆಟ ಗಾರನೆದುರು ಸೇನ್‌ 19-21, 21-16, 21-12 ಅಂತರದ ಮೇಲುಗೈ ಸಾಧಿಸಿದರು.

ಲಕ್ಷ್ಯ ಸೇನ್‌ ವಿಶ್ವ ರ್‍ಯಾಂಕಿಂಗ್‌ನಲ್ಲಿ 17ನೇ ಸ್ಥಾನ ದಲ್ಲಿದ್ದು, ಈ ಕೂಟದಲ್ಲಿ 3ನೇ ಶ್ರೇಯಾಂಕ ಪಡೆದಿ ದ್ದಾರೆ. ರವಿವಾರದ ಪ್ರಶಸ್ತಿ ಸಮರದಲ್ಲಿ ಸಿಂಗಾಪುರದ ವಿಶ್ವ ಚಾಂಪಿಯನ್‌ ಆಟಗಾರ ಲೋಹ್‌ ಕೀನ್‌ ವ್ಯೂ ವಿರುದ್ಧ ಲಕ್ಷ್ಯ ಸೇನ್‌ ಸೆಣಸಲಿದ್ದಾರೆ. ಎದುರಾಳಿ, ಕೆನಡಾದ ಬ್ರಿಯಾನ್‌ ಯಾಂಗ್‌ ಗಂಟಲುನೋವು ಹಾಗೂ ತಲೆನೋವಿನ ಕಾರಣ ಹಿಂದೆ ಸರಿದುದರಿಂದ ವ್ಯೂಗೆ ವಾಕ್‌ ಓವರ್‌ ನೀಡಲಾಯಿತು. ವ್ಯೂ ಇಲ್ಲಿ 5ನೇ ಶ್ರೇಯಾಂಕ ಪಡೆದಿದ್ದಾರೆ.
ಇದು ಕಳೆದ ವರ್ಷದ ಡಚ್‌ ಓಪನ್‌ ಫೈನಲ್‌ ಪಂದ್ಯದ ಪುನರಾವರ್ತನೆಯಾಗಲಿದೆ. ಅಲ್ಲಿ ಭಾರತೀಯನಿಗೆ ನೇರ ಗೇಮ್‌ಗಳ ಆಘಾತ ಎದುರಾಗಿತ್ತು. ಇದಕ್ಕೆ ಸೇಡು ತೀರಿಸಿಕೊಳ್ಳಲು ಉತ್ತಮ ಅವಕಾಶವೊಂದು ಲಕ್ಷ್ಯ ಸೇನ್‌ಗೆ ಎದುರಾಗಿದೆ. ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದ ಹೆಗ್ಗಳಿಕೆ ಸೇನ್‌ ಅವರದು.

ಆಕರ್ಷಿಗೆ ಸೋಲು
ಈ ಕೂಟದ ಆಕರ್ಷಣೆಯಾಗಿದ್ದ ಆಕರ್ಷಿ ಕಶ್ಯಪ್‌ ಅವರ ಆಟ ಸೆಮಿಫೈನಲ್‌ನಲ್ಲಿ ಕೊನೆಗೊಂಡಿತು. ಅವರು ಥಾಯ್ಲೆಂಡ್‌ನ‌ ಬುಸಾನನ್‌ ಒನಾºಮ್ರುಂಗಫಾನ್‌ ವಿರುದ್ಧ ಮೊದಲ ಗೇಮ್‌ನಲ್ಲಿ ಭರ್ಜರಿ ಹೋರಾಟ ಸಂಘಟಿಸಿದರು. ಅಂತಿಮವಾಗಿ 24-26ರಿಂದ ಕಳೆದುಕೊಂಡರು. ದ್ವಿತೀಯ ಗೇಮ್‌ನಲ್ಲಿ ಭಾರತೀಯಳ ಆಟ ಸಾಗಲಿಲ್ಲ. ಇದನ್ನು 9-21ರಿಂದ ಸೋತರು.

ಇದನ್ನೂ ಓದಿ:ಸರಣಿ ಸೋಲಿನ ಬೆನ್ನಲ್ಲೇ ಟೆಸ್ಟ್ ನಾಯಕತ್ವದಿಂದ ಕೆಳಗಿಳಿದ ವಿರಾಟ್ ಕೊಹ್ಲಿ

Advertisement

ಚಿರಾಗ್‌-ರಾಂಕಿರೆಡ್ಡಿ ಜಯ
ಪುರುಷರ ಡಬಲ್ಸ್‌ ಸೆಮಿಫೈನಲ್‌ನಲ್ಲಿ ದ್ವಿತೀಯ ಶ್ರೇಯಾಂಕದ ಚಿರಾಗ್‌ ಶೆಟ್ಟಿ-ಸಾತ್ವಿಕ್‌ ಸಾಯಿರಾಜ್‌ ರಾಂಕಿರೆಡ್ಡಿ ಫ್ರಾನ್ಸ್‌ನ ಫ್ಯಾಬಿಯನ್‌ ಡೆಲ್ರೂ-ವಿಲಿಯಂ ವಿಲೇಜರ್‌ ವಿರುದ್ಧ 21-10, 21-18ರಿಂದ ಗೆದ್ದು ಬಂದರು.

ಮತ್ತೆ ಕೊರೊನಾ ಕೇಸ್‌
ಇಂಡಿಯಾ ಓಪನ್‌ ಬ್ಯಾಡ್ಮಿಂಟನ್‌ನಲ್ಲಿ ಮತ್ತೆ ಕೊರೊನಾ ಪಾಸಿಟಿವ್‌ ಕೇಸ್‌ ಪತ್ತೆಯಾಗಿದೆ. ಇದರಿಂದ ರಶ್ಯದ ಮಿಕ್ಸೆಡ್‌ ಜೋಡಿ ಕೂಟದಿಂದ ಹಿಂದೆ ಸರಿದಿದೆ.

ದ್ವಿತೀಯ ಶ್ರೇಯಾಂಕದ ಆಟಗಾರ ರೊಡಿಯೋನ್‌ ಅಲಿಮೋವ್‌ ಅವರ ಕೋವಿಡ್‌ ಫ‌ಲಿತಾಂಶ ಪಾಸಿಟಿವ್‌ ಬಂದಿತ್ತು. ಅವರು ಅಲಿನಾ ಡಾವೆÉಟೋವಾ ಜತೆಗೂಡಿ ಮಿಶ್ರ ಡಬಲ್ಸ್‌ ಸ್ಪರ್ಧೆ ಮುಂದುವರಿಸಬೇಕಿತ್ತು. ಆದರೆ ಇವರಿಬ್ಬರೂ ಹಿಂದೆ ಸರಿದುದರಿಂದ ಇಂಡೋನೇಶ್ಯದ ಯಾಂಗ್‌ ಕೈ ಟೆರ್ರಿ ಹೀ-ವೀ ಹಾನ್‌ ಟಾನ್‌ ಜೋಡಿಗೆ ವಾಕ್‌ಓವರ್‌ ನೀಡಲಾಯಿತು.

ಎರಡು ದಿನ ಮೊದಲು 8 ಮಂದಿ ಶಟ್ಲರ್ ಗೆ
ಪಾಸಿಟಿವ್‌ ಅಂಟಿತ್ತು. ಇವರೆಲ್ಲ ಪಂದ್ಯಾವಳಿ ತ್ಯಜಿಸಿದ್ದರು. ಕೂಟಕ್ಕೂ ಮೊದಲು ಸಾಯಿ ಪ್ರಣೀತ್‌, ಮನು ಅತ್ರಿ, ಧ್ರುವ ರಾವತ್‌ ಕೊರೊನಾ ಪಾಸಿಟಿವ್‌ ಕಾರಣ ಹಿಂದೆ ಸರಿದಿದ್ದರು. ಇಂಗ್ಲೆಂಡಿನ ಸೀನ್‌ ವೆಂಡಿ, ಕೋಚ್‌ ನಥನ್‌ ರಾಬರ್ಟ್‌ಸನ್‌ ಅವರ ಫ‌ಲಿತಾಂಶ ಪಾಸಿಟಿವ್‌ ಬಂದುದರಿಂದ ಆಂಗ್ಲರ ಪಡೆಯೇ ಕೂಟದಲ್ಲಿ ಪಾಲ್ಗೊಂಡಿರಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next