Advertisement

ಈ ಸಲ ಗೆಲ್ಲದಿದ್ದರೆ ಭಾರತ ಇನ್ನೆಂದೂ ಗೆಲ್ಲದು: ಜೋನ್ಸ್‌

06:20 AM Dec 01, 2018 | Team Udayavani |

ಸಿಡ್ನಿ: ಪ್ರವಾಸಿ ಭಾರತ ಕ್ರಿಕೆಟ್‌ ತಂಡಕ್ಕೆ ಈ ಬಾರಿ ಗೆಲ್ಲಲಾಗದಿದ್ದರೆ ಇನ್ನೆಂದೂ ಆಸ್ಟ್ರೇಲಿಯದಲ್ಲಿ ಟೆಸ್ಟ್‌ ಸರಣಿ ಗೆಲುವು ಸಾಧ್ಯವಾಗದು ಎಂದು ಕಾಂಗರೂ ನಾಡಿನ ಮಾಜಿ ಕ್ರಿಕೆಟಿಗ ಡೀನ್‌ ಜೋನ್ಸ್‌ ಅಭಿಪ್ರಾಯಪಟ್ಟಿದ್ದಾರೆ.

Advertisement

“ಈಗಿನ ಭಾರತ ತಂಡ ಆಸ್ಟ್ರೇಲಿಯ ತಂಡಕ್ಕಿಂತ ಎಲ್ಲ ವಿಭಾಗಗಳಲ್ಲೂ ಬಲಿಷ್ಠವಾಗಿದೆ; ಅದೆಷ್ಟೋ ಮುಂದಿದೆ. ಆದರೆ ಅವರಿಗೆ ತಮ್ಮಲ್ಲಿ ನಂಬಿಕೆ ಇದೆಯೇ, ವೇಗದ ಬೌಲರ್‌ಗಳು ಈ ಸುದೀರ್ಘ‌ ಸರಣಿಯನ್ನು ನಿಭಾಯಿಸಲು ಶಕ್ತರೇ ಎಂಬುದಷ್ಟೇ ಪ್ರಶ್ನೆ’ ಎಂದು ಡೀನ್‌ ಜೋನ್ಸ್‌ “ಸಿಡ್ನಿ ಮಾರ್ನಿಂಗ್‌ ಹೆರಾಲ್ಡ್‌’ ಜತೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ.

“ಆಸ್ಟ್ರೇಲಿಯ ಪ್ರವಾಸವೂ ಸೇರಿದಂತೆ ಭಾರತದ ವಿದೇಶಿ ಟೆಸ್ಟ್‌ ದಾಖಲೆ ಹೇಗೆಯೇ ಇರಲಿ, ಈ ಬಾರಿ ಭಾರತವೇ ನೆಚ್ಚಿನ ತಂಡ ಎಂಬುದರಲ್ಲಿ ಎರಡು ಮಾತಿಲ್ಲ. ಕೊಹ್ಲಿ ಟೀಮ್‌ ಕನಿಷ್ಠ 2-0 ಅಥವಾ 3-0 ಅಂತರದಿಂದ ಸರಣಿ ಗೆಲ್ಲುವ ಸಾಧ್ಯತೆ ಇದೆ. ಆಸ್ಟ್ರೇಲಿಯ ಎಲ್ಲಿಯೂ ಗೆಲ್ಲುತ್ತದೆ ಎಂಬ ನಂಬಿಕೆ ನನಗಿಲ್ಲ’ ಎಂದು ಜೋನ್ಸ್‌ ಹೇಳಿದರು.

“ಸಾಮಾನ್ಯವಾಗಿ ಆಸ್ಟ್ರೇಲಿಯವನ್ನು ಅವರ ನೆಲದಲ್ಲಿ ಮಣಿಸುವುದು ಕಷ್ಟ. ಆದರೆ ಈ ಬಾರಿ ಸ್ಮಿತ್‌, ವಾರ್ನರ್‌ ತಂಡದಲ್ಲಿಲ್ಲ. ಇವರಿಬ್ಬರು ಸೇರಿಕೊಂಡು ತಂಡಕ್ಕೆ ಶೇ. 40ರಷ್ಟು ಸ್ಥಿರತೆ ತಂದುಕೊಡುತ್ತಿದ್ದರು. ಆಸ್ಟ್ರೇಲಿಯ ಗೆಲ್ಲಬೇಕಾದರೆ ಇವರಿಬ್ಬರ ಸ್ಥಾನವನ್ನು ಸಮರ್ಥವಾಗಿ ತುಂಬುವವರ ಅಗತ್ಯವಿದೆ. ಆದರೆ ಅಂಥವರು ಯಾರಿದ್ದಾರೆ?’ ಎಂದು ಡೀನ್‌ ಜೋನ್ಸ್‌ ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next